ಮಂಡ್ಯ : ರಸ್ತೆ ಅಗಲೀಕರಣದ ಹೆಸರಲ್ಲಿ 50ಕ್ಕೂ ಹೆಚ್ಚು ಮರಗಳ ಮಾರಣ ಹೋಮ..!

ಮಂಡ್ಯ : ರಸ್ತೆ ಅಗಲೀಕರಣದ ಹೆಸರಲ್ಲಿ ಮರಗಳ ಮಾರಣ ಹೋಮ ಮಾಡಲಾಗಿರುವ ಘಟನೆ ಘಟನೆ ಮೈಸೂರು ಕೆ.ಆರ್.ಎಸ್ ರಸ್ತೆಯ ಪಂಪೌಸ್ ಬಳಿ ನಡೆದಿದೆ. ಪಂಪ್ ಹೌಸ್ ಬಳಿಯ ರಸ್ತೆ ಬದಿಯ ಮರಗಳಿಗೆ ಅಧಿಕಾರಿಗಳು ಕೊಡಲಿ ಹಾಕಿದ್ದಾರೆ.

ರಸ್ತೆ ಕಿರಿದಾಗಿದೆ ಎಂದು ಡಾಬಾ, ಕಲ್ಯಾಣ ಮಂಟಪ, ಪೆಟ್ರೋಲ್ ಬಂಕ್ ನ ವಾಣಿಜ್ಯ ಉದ್ದೇಶಕ್ಕಾಗಿ ಮರಗಳ ಹನನ ನಡೆದಿದೆ. ಡಾಬಾ, ಪೆಟ್ರೋಲ್ ಬಂಕ್ ಮತ್ತು ಕಲ್ಯಾಣ ಮಂಟಪದ ಮಾಲೀಕರೊಂದಾಗಿ ಅರಣ್ಯಾಧಿಕಾರಿಗಳ ಶಾಮೀಲಾಗಿ ಮರಗಳ ಮಾರಣ ಹೋಮ ನಡೆಸಿದ್ದಾರೆ.

ರಸ್ತೆ ಅಗಲೀಕರಣಕ್ಕಾಗಿ  50 ಕ್ಕು ಹೆಚ್ಚು ಮರಗಳನ್ನು ಕಡಿದು ಮಾಡಿ ಮಾರಾಟ ಮಾಡಲಾಗಿದೆ. ಅರಣ್ಯಾಧಿಕಾರಿ ಗಳ ನಡೆಗೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com