ಕಿರಾತಕನಿಗೆ ಜೋಡಿಯಾಗಲು ಮತ್ತೆ ಸ್ಯಾಂಡಲ್​ವುಡ್​ಗೆ ಜಿಂಕೆಮರಿ ಶ್ವೇತಾ ಎಂಟ್ರಿ…!

ಬೆಂಗಳೂರು : ಯಶ್‌ ಮತ್ತು ಅನಿಲ್‌ ಕುಮಾರ್‌ ಕಾಂಬಿನೇಶನ್‌ನ ಹೊಸ ಚಿತ್ರ ಟೈಟಲ್‌ ವಿವಾದದಲ್ಲಿರುವಾಗಲೇ ಆ ಸಿನಿಮಾದ ನಾಯಕಿಯ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಶ್ವೇತಾ ಆಯ್ಕೆಯಾಗಿದ್ದಾರೆ.

ಕೆಜಿಎಫ್‌ ನಂತರ ಯಶ್‌ ನಟನೆಯ ಹೊಸ ಚಿತ್ರಕ್ಕೆ ಕಿರಾತಕ-2 ಎಂಬ ಟೈಟಲ್‌ ಎನ್ನಲಾಗಿತ್ತು. ಆದರೆ ನಿರ್ದೇಶಕ ಪ್ರದೀಪ್‌ ರಾಜ್‌, ‘ ನಾನು ಆ ಟೈಟಲ್‌ನ್ನು ಬೇರೆ ಯಾವ ನಿರ್ದೇಶಕರಿಗೂ ಕೊಡುವುದಿಲ್ಲ. ಅದು ನನ್ನ ಮತ್ತು ಯಶ್‌ ಕಾಂಬಿನೇಶನ್‌ನ ಸಿನಿಮಾ’ ಎಂದು ಹೇಳಿದ್ದರು. ಅದಕ್ಕಾಗಿ ಚಿತ್ರತಂಡ ಅದಕ್ಕೆ ಮೈ ನೇಮ್‌ ಈಸ್‌ ಕಿರಾತಕ ಎಂದು ಟೈಟಲ್‌ ಇಡಲು ಯೋಜಿಸಿದೆ. ಇದರ ನಡುವೆ ಸಿನಿಮಾದ ಒಬ್ಬ ನಾಯಕಿಯಾಗಿ ಸ್ಯಾಂಡಲ್ ವುಡ್ ನಲ್ಲಿ  ಜಿಂಕೆಮರಿ ಎಂದೇ ಖ್ಯಾತಿ ಪಡೆದಿರುವ ಶ್ವೇತಾ ಆಯ್ಕೆಯಾಗಿದ್ದಾರೆ.

Related image

ನಂದ ಲವ್ಸ್‌ ನಂದಿತಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಂತರ ತಮಿಳಿಗೆ ಕಾಲಿಟ್ಟು ಬಿಝಿ ನಟಿಯಾದರು. ಆರು ವರ್ಷಗಳಿಂದ ಸುಮಾರು ತಮಿಳು, ತೆಲುಗು, ಮಲಯಾಳಂ ಸೇರಿದಂತೆ 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಲ್ಲಿ ಹೆಸರು ಮಾಡಿದ್ದಾರೆ.ಸದ್ಯ ತೆಲುಗು, ತಮಿಳು, ಹಿಂದಿ ಸೇರಿದಂತೆ ಮೂರು ಚಿತ್ರಗಳಲ್ಲಿ ಬಿಝಿ ಇರುವ ಶ್ವೇತಾಗೆ ಯಶ್‌ ಸಿನಮಾ ಕೂಡಾ ಸೇರಿಕೊಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com