ಕೆಜಿಎಫ್ ಅಡ್ಡಕ್ಕೆ ಮಿಲ್ಕಿ ಬ್ಯೂಟಿ ಎಂಟ್ರಿ : ಸ್ಪೆಷಲ್ ಹಾಡಿಗೆ ಯಶ್ ಜೊತೆ ತಮನ್ನಾ ಸ್ಟೆಪ್….!

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಗೆ ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನ ಬರಲಿದ್ದರೆ. ಯಶ್-ತಮನ್ನಾ ಕೆಜಿಫ್ ಸ್ಪೆಷಲ್ ಸಾಂಗ್‌ನಲ್ಲಿ ಕೆಜಿಎಫ್  ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಟಾಲಿವುಡ್ ನಲ್ಲಿ ಹೆಸರು ಮಾಡಿರುವ ತಮನ್ನ ಈಗ ಸ್ಯಾಂಡಲ್ ವುಡ್ ಗೆ ಕಾಲಿಡಲಿದ್ದಾರೆ. ಹೌದು . 1970ರಲ್ಲಿ ತೆರೆ ಕಂಡ ‘ಪರೋಪಕಾರಿ’ ಚಿತ್ರದಲ್ಲಿನ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರದಲ್ಲಿ ರಿಕ್ರಿಯೇಟ್ ಮಾಡಲಾಗಿದೆ. ಈ ಹಾಡಿಗೆ ಸ್ಟಾರ್ ನಟಿಯರನ್ನೇ ಕರೆ ತರಲು ಮುಂದಾಗಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.

Related image

ಇದೇನು ಮೊದಲ ಬಾರಿಗೆ ತಮನ್ನಾ ಸ್ಯಾಂಡಲ್ ವುಡ್​ ಗೆ ಬರುತ್ತಿಲ್ಲ ಈಗಾಗಲೇ ನಿಖಿಲ್ ಅಭಿನಯದ ಜಾಗ್ವರ್ ಚಿತ್ರದಲ್ಲೂ ತಮನ್ನಾ ಸ್ಟಪ್ ಹಾಕಿ ಹೋಗಿದ್ದರು, ಈಗ ಮತ್ತೊಂಮ್ಮೆ ಯಶ್ ಜೊತೆ ಹೆಜ್ಜೆ ಹಾಕಲು ಬರುತ್ತಿದ್ದರೆ. ಅದು ಜಯಲಲಿತ ಸೊಂಟ ಬಳುಕಿಸಿ ಹೆಜ್ಜೆ ಹಾಕಿದ್ದ ಜೋಕೆ ನಾನು ಬಳ್ಳಿಯ ಮಿಂಚು ಹಾಡಿಗೆ ಇದೀಗ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ.

ಕಾಜಲ್ ಅಗರವಾಲ್, ಲಕ್ಷ್ಮಿ ರೈ, ತಮನ್ನಾ ಭಾಟಿಯಾ ಸೇರಿದಂತೆ ಮತ್ತಿರರ ಸ್ಟಾರ್ ನಟಿಯರ ಹೆಸರುಗಳು ಕೇಳಿಬಂದಿದ್ದವು. ಆದ್ರೆ ಈಗ ಫೈನಲ್ ಆಗಿದ್ದು ತಮನ್ನಾ . ಉಪೇಂದ್ರ ಕುಮಾರ್ ಸಂಗೀತದಲ್ಲಿ ಎಲ್.ಆರ್. ಈಶ್ವರಿ ಹಾಡಿದ್ದ ಈ ಹಾಡು ಮತ್ತೆ ಕೇಳಿಬರಲಿದೆ ಹೊಸ ಅವತಾರದಲ್ಲಿ ತೆರೆಮೇಲೆ ಬರಲಿದೆ.

Leave a Reply

Your email address will not be published.

Social Media Auto Publish Powered By : XYZScripts.com