ಅಣ್ಣಾದೊರೈ ಸ್ಮಾರಕ ಪಕ್ಕದಲ್ಲಿ ಕರುಣಾನಿಧಿ ಸಮಾಧಿ: ಅರ್ಜಿಗಳನ್ನು ತಿರಸ್ಕರಿಸಿದ ಹೈಕೋರ್ಟ್

ಅಣ್ಣಾದೊರೈ, ಎಂಜಿಆರ್ ಹಾಗೂ ಜಯಲಲಿತಾ ಸಮಾಧಿಗಳು ಇರುವ ರಾಜಧಾನಿ ಚೆನ್ನೈನ ಮರೀನಾ ಬೀಚ್ ನಲ್ಲಿ ಅಣ್ಣಾದೊರೈ ಸ್ಮಾರಕದ ಪಕ್ಕದಲ್ಲಿಯೇ ಕರುಣಾನಿಧಿಯವರನ್ನು ಮಣ್ಣು ಮಾಡಬೇಕೆಂದು ಡಿಎಂಕೆ ಪಟ್ಟು ಹಿಡಿದಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಹಾಗೂ ಕಾನೂನು ತೊಡಕು ಮುಂದೊಡ್ಡಿ ಮುಖ್ಯಮಂತ್ರಿ ಇ. ಪಳನಿಸ್ವಾಮಿಯವರು ಇದನ್ನು ನಿರಾಕರಿಸಿದ್ದರು.
ಇದರ ಬೆನ್ನಲ್ಲೇ ಡಿಎಂಕೆ ಕಾರ್ಯಕರ್ತರು ಹಿಂಸಾಚಾರ ನಡೆಸಿದರೆ ಎಂಬ ಕಾರಣಕ್ಕೆ ಕಾನೂನು ವಿಭಾಗ ರಾತ್ರೋರಾತ್ರಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್’ನ ಹಂಗಾಮಿ ನ್ಯಾಯಮೂರ್ತಿ, ಕನ್ನಡಿಗ ಹುಲುವಾಡಿ ಜಿ.ರಮೇಶ್ ಅವರು ಈ ಅರ್ಜಿಯನ್ನು ರಾತ್ರಿಯೇ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದ್ದರು.
ಇನ್ನ ಕರುಣಾನಿಧಿ ಅಂತ್ಯಕ್ರಿಯೆಗೆ  ಮರೀನಾ ಬೀಚ್ ನಲ್ಲೇ ಅವಕಾಶ  ಕೊಡಿ ಎಂದು ಹೈಕೋರ್ಟ್  ಮುಂದೆಯೂ ಜನಸಾಗರವಿದ್ದು, ಬಿಗಿ ಪೊಲೀಸ್  ಬಂದೋಬಸ್ತ್ ಏರ್ಪಡಿಸಲಾಗಿದೆ. ಕರುಣಾನಿಧಿ ತಮಿಳುನಾಡಿನಲ್ಲಿ 5ಬಾರಿ ಸಿಎಂ ಆಗಿದ್ದು,  ಜನರ ಅಭಿವೃದ್ದಿಯಾಗಿದ್ದು ಶ್ರಮಿಸಿದ್ದಾರೆ.
ಇದರಂತೆ ಇಂದು ಬೆಳಿಗ್ಗೆ 8 ಗಂಟೆಗೆ ವಿಚಾರಣೆ ಆರಂಭವಾಗಿದ್ದು, ವಿಚಾರಣೆ ವೇಳೆ ಮರೀನಾ ಬೀಚ್ ನಲ್ಲಿ ಸಮಾಧಿ ನಿರ್ಮಾಣ ಬೇಡವೆಂದು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ 5 ಅರ್ಜಿಗಳನ್ನು ವಾಪಸ್ ತೆಗೆದುಕೊಳ್ಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com