ದ್ರಾವಿಡರ ಸೂರ್ಯ ಅಸ್ತಂಗತ : ಕರುಣಾನಿಧಿ ಬದುಕಿನ ಒಂದು ಕಿರು ಪರಿಚಯ..

ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಮಂಗಳವಾರ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಹಿರಿಯ ರಾಜಕೀಯ ಮುತ್ಸದ್ದಿಯ ನಿಧನಕ್ಕೆ ದೇಶದ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕರುಣಾನಿಧಿ ಬದುಕಿನ ಕಿರು ಪರಿಚಯ ಇಲ್ಲಿದೆ..

1924 ಜೂನ್ 3 ರಂದು ತಮಿಳುನಾಡಿನ ತಿರುಕ್ಕವಲೈನಲ್ಲಿ ಜನಿಸಿದ ಕರುಣಾನಿಧಿಯವರ ಮೊದಲ ಹೆಸರು ದಕ್ಷಿಣಾಮೂರ್ತಿ ಎಂದಾಗಿತ್ತು. ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಮುಖಂಡರಾಗಿದ್ದ ಕರುಣಾನಿಧಿ 14ನೇ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶಿಸಿದಿದ್ದರು. 1957ರಲ್ಲಿ ತಮ್ಮ 33ನೇ ವಯಸ್ಸಿನಲ್ಲಿ ಮೊದಲ ಸಲು ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಸಾಹಿತಿ, ಕವಿಯಾಗಿ ಗುರುತಿಸಿಕೊಂಡಿದ್ದ ಅವರು ಹಲವು ಕೃತಿಗಳನ್ನು ರಚಿಸಿದ್ದರು.
ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ನಿಧನದ ಬಳಿಕ ಪಕ್ಷದ ಮುಂದಾಳತ್ವ ವಹಿಸಿಕೊಂಡ ಕರುಣಾನಿಧಿ 5 ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 60 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಕರುಣಾನಿಧಿ ಚುನಾವಣೆಯಲ್ಲಿ ಒಮ್ಮೆಯೂ ಸೋಲು ಕಾಣದೇ ಇದ್ದದ್ದು ಅವರ ಹೆಗ್ಗಳಿಕೆ. ಕರುಣಾನಿಧಿ ಯಾವಾಗಲೂ ಬಿಳಿಪಂಚೆ, ಬಿಳಿ ಅಂಗಿ, ಹಳದಿ ಶಾಲು, ಕಪ್ಪು ಕನ್ನಡಕ ಧರಿಸಿರುತ್ತಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com