ಕರುಣಾನಿಧಿ ಅಂತಿಮ ದರ್ಶನದ ವೇಳೆ ಕಾಲ್ತುಳಿತಕ್ಕೆ 2 ಸಾವು, 42 ಮಂದಿಗೆ ಗಂಭೀರ ಗಾಯ

ತಮಿಳುನಾಡು : ತಮಿಳುನಾಡಿನ ದಂತ ಕತೆ ತಮಿಳಿಗರ ನಿಧಿಯಾಗಿದ್ದ ಕರುಣಾ ನಿಧಿ ನೆನ್ನ ಸಂಜೆ ಇಹಲೋಕ ತ್ಯಜಿಸಿದ್ದು, ನೆಚ್ಚಿನ ನಾಯಕನನ್ನು ನೋಡಲು ಅಭಿಮಾನಿಗಳ ಜನಸಾಗರವೇ ಹರಿದುಬರುತ್ತಿದ್ದು, ಈ ವೇಳೆ ಕಾಲ್ತುಳಿತಕ್ಕೆ ಇಬ್ಬರು ಮೃತಪಟ್ಟಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಅಂತ್ಯಸಂಸ್ಕಾರ  ಇಂದು ಸಂಜೆ 4ಕ್ಕೆ ಮರೀನಾ ಬೀಚ್ ಬಳಿ ನೆರೆವೆರಲಿದೆ. ತಮಿಳುನಾಡಿನಲ್ಲಿ ನೀರವಮೌನ ಆವರಿಸಿದ್ದು, ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲು  ಜನ ಸಾಗರ ಹರಿದುಬರುತ್ತಿದ್ದು, ರಾಜಾಜಿ ಹಾಲ್​​​ ಬಳಿ ಕಾಲ್ತುಳಿತ, ಲಘು ಲಾಠಿಚಾರ್ಜ್​ ಕೂಡ ನಡೆಯುತ್ತಿದೆ.

ಅಲ್ಲದೇ ಅಲ್ಲಲ್ಲಿ ಭದ್ರತೆಗಾಗಿ ಹಾಕಲಾಗಿದ್ದ ಬ್ಯಾರಿಕೇಡ್​ಗಳನ್ನೂ ಲೆಕ್ಕಿಸದೇ ಅಭಿಮಾನಿಗಳು ನುಗ್ಗುತ್ತಿದ್ದಾರೆ.ಕಾಲ್ತುಳಿತದಿಂದ ಇಬ್ಬರು ಮೃತಪಟ್ಟಿದ್ದು 42 ಮಂದಿಗೆ ಗಂಭೀರ ಗಾಯವಾಗಿದೆ. ಮೃತ ಮಹಿಳೆ 60ವರ್ಷದ ಸೆನ್​ಬೇಗಂ ಅಂತಾ ತಿಳಿದು ಬಂದಿದ್ದು, ಇನ್ನೂಬ್ಬರ ಗುರುತು ಸದ್ಯಕ್ಕೆ ಪತ್ತೆಯಾಗಿಲ್ಲ. ಕಾಲ್ತುಳಿತದಿಂದಾಗಿ ಮಕ್ಕಳು ಕಾಣೆಯಾಗಿದ್ದು, ಮೈಕ್ರೋಫೋನ್​​ ಮೂಲಕ ಕರೆದು ಪೋಷಕರು ಹುಡುಕುತ್ತಿದ್ದಾರೆ.

ಸಾರ್ವಜನಿಕರು ಹಾಗೂ ಅಭಿಮಾನಿಗಳು ಶಾಂತಿ ಕಾಪಾಡಬೇಕೆಂದು ಕರುಣಾನಿಧಿ ಪುತ್ರ ಸ್ಟ್ಯಾಲಿನ್ ಮನವಿ ಮಾಡಿದ್ದಾರೆ. ಪೊಲೀಸರು ಬೇಕಂತಲೇ ಸರಿಯಾಗಿ ಭದ್ರತೆ ಏರ್ಪಡಿಸಿಲ್ಲ. ಅಧಿಕಾರದಲ್ಲಿರುವವರು  ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಸರ್ಕಾರದ ಬೆಂಬಲ ಇದೆಯೋ ಗೊತ್ತಿಲ್ಲ. ನಿಮ್ಮೆಲ್ಲರ ಬೆಂಬಲ ನನ್ನೊಂದಿಗಿದೆ. ದಯವಿಟ್ಟು ಶಾಂತಿಯಿಂದಿರಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

 

 

 

Leave a Reply

Your email address will not be published.

Social Media Auto Publish Powered By : XYZScripts.com