ಕಪಿಲ್ ದೇವ್ ಶತಮಾನಕ್ಕೆ ಒಮ್ಮೆ ಜನಿಸುವ ಕ್ರಿಕೆಟಿಗ, ಪಾಂಡ್ಯ ಜೊತೆ ಹೋಲಿಕೆ ಸಲ್ಲ : ಗವಾಸ್ಕರ್

‘ ಮಾಜಿ ಕ್ರಿಕೆಟಿಗ, ಆಲ್ರೌಂಡರ್ ಕಪಿಲ್ ದೇವ್ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಹೋಲಿಕೆ ಮಾಡುವುದು ಸರಿಯಲ್ಲ ‘ ಎಂದು ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಕಪಿಲ್ ದೇವ್ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಹೋಲಿಕೆ ಮಾಡುವುದರ ಕುರಿತು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್ ಗವಾಸ್ಕರ್ ‘ ಕಪಿಲ್ ದೇವ್ ಅವರನ್ನು ಯಾರೊಂದಿಗೂ ಹೋಲಿಸುವುದು ಸರಿಯಲ್ಲ, ಪೀಳಿಗೆಗೆ ಒಮ್ಮೆ ಜನಿಸುವ ಆಟಗಾರ ಅಲ್ಲ, ಬದಲಾಗಿ ಡಾನ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್ ಅವರಂತೆ ನೂರು ವರ್ಷಗಳಲ್ಲಿ ಒಮ್ಮೆ ಮಾತ್ರ ಜನಿಸುವ ಕ್ರಿಕೆಟರ್ ಆಗಿದ್ದಾರೆ. ಯಾರೊಂದಿಗೂ ಹೋಲಿಕೆ ಸಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com