ಪುರುಷರು ಮಾತ್ರ ದೇಶ ನಡೆಸಬೇಕೆಂಬುದು RSS – BJP ಮಾನಸಿಕತೆಯಾಗಿದೆ : ರಾಹುಲ್ ಗಾಂಧಿ

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ‘ ಪುರುಷರು ಮಾತ್ರ ದೇಶವನ್ನು ನಡೆಸಬೇಕೆಂಬುದು ಆರ್ ಎಸ್ಎಸ್ ಮತ್ತು ಬಿಜೆಪಿ ಮಾನಸಿಕತೆಯಾಗಿದೆ ‘ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದೆಹಲಿಯ ತಾಲಕಟೋರಾ ಮೈದಾನದಲ್ಲಿ ಮಂಗಳವಾರ ನಡೆದ ಮಹಿಳಾ ಅಧಿಕಾರ ಸಮ್ಮೇಳನದಲ್ಲಿ ಮಾತನಾಡಿದ ಅವರು ‘ ಆರ್ ಎಸ್ಎಸ್ ನಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ, ಸಂಘ ಪರಿವಾರದಲ್ಲಿ ಮಹಿಳೆಯರಿಗೆ ಯಾವುದೇ ಅಧಿಕಾರ ಏಕೆ ನೀಡಲಾಗುವುದಿಲ್ಲ..? ಮಹಿಳೆಯರು ಆರ್ ಎಸ್ಎಸ್ ಸ್ವಯಂಸೇವಕರಾಗಲು ಸಾಧ್ಯವಿಲ್ಲ ‘ ಎಂದಿದ್ದಾರೆ.

‘ ಕೇಂದ್ರ ಸರ್ಕಾರ ಮಹಿಳೆಯರಿಗೆ ಮೀಸಲಾತಿ ಬಿಲ್ ಜಾರಿ ಮಾಡಿದರೆ ಕಾಂಗ್ರೆಸ್ ಅದನ್ನು ಸಮರ್ಥಿಸುತ್ತದೆ. ಮಹಿಳಯೆರಿಗೆ ಸಮಾಜದಲ್ಲಿ ಪುರುಷರಿಗೆ ಸಮನಾದ ಸ್ಥಾನಮಾನ ನೀಡಲು ಕಾಂಗ್ರೆಸ್ ಎಲ್ಲ ರೀತಿಯಲ್ಲಿಯೂ ಪ್ರಯತ್ನಿಸಲಿದೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com