ಮಂಡ್ಯ : HDK ಸಿಎಂ ಆಗಿದ್ದಕ್ಕೆ ನಾಟಿ ಕೋಳಿ ಪರಸೆ : ತೊರೆಯಮ್ಮ ದೇವಿಗೆ 151 ಕೋಳಿ ಬಲಿ..!

ಮಂಡ್ಯ: ನೀವು ಎಂತೆಂಹದ ಪರಸೆಯನ್ನು ನೋಡಿದ್ದೀರಿ. ಆದರೆ ಮಂಡ್ಯದ ಜೆಡಿಎಸ್ ಅಭಿಮಾನಿಗಳು ಮಾಡಿಕೊಂಡಿದ್ದ ಹರಕೆಯ ಪರಸೆಯನ್ನು ಕೇಳಿದ್ರೆ ಆಶ್ಚರ್ಯದ ಜೊತೆಗೆ ಬಾಯಲ್ಲಿ ನೀರು ಬರಿಸಿಕೊಳ್ಳೋದರಲ್ಲಿ ಅನುಮಾನವೇ ಬೇಡ. ಯಾಕೆಂದರೆ ಅವರ ಹರಕೆಯೇ ಹಾಗಿದೆ‌. ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದ ಹುಲ್ಲೇಗೌಡರ ಈ ಹರಕೆ ಗ್ರಾಮದ ಜನರ ಬಾಯಲ್ಲೂ ನೀರು ತರಿಸಿದೆ.

151 ನಾಟಿ ಕೋಳಿಗಳನ್ನು ಗ್ರಾಮದ ತೊರೆಯಮ್ಮ ದೇವಿಗೆ ಬಲಿ ಕೊಟ್ಟು, ಸಾಮೂಹಿಕ ಬೋಜನ ಹಾಕಿಸುವ ಹರಕೆಯನ್ನು ಕಟ್ಟಿಕೊಂಡಿದ್ದರಂತೆ ಈ ಹುಲ್ಲೇಗೌಡರು‌. ಹಾಗಾಗಿ ಇಂದು ಮುಂಜಾನೆ ನಾಟಿ ಕೋಳಿಗಳನ್ನು ತರಿಸಿ ದೇವಿಗೆ ಬಲಿ ಕೊಟ್ಟು ಅಡುಗೆ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಗ್ರಾಮಸ್ಥರು.

ಚುನಾವಣೆಯಲ್ಲಿ ಹುಲ್ಲೇಗೌಡರು ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಬೇಕು, ಕೆ.ಆರ್.ಪೇಟೆಯ ನಾರಾಯಣ ಗೌಡರು ಗೆದ್ದು ಬರಬೇಕು, ಜಿಲ್ಲೆಯ ಎಲ್ಲಾ ಕ್ಷೇತ್ರಗಳು ಜೆಡಿಎಸ್ ಪಾಲಾಗಬೇಕು ಎಂಬ ಹರಕೆಯನ್ನು ದೇವಿ ಬಳಿ ಕಟ್ಟಿಕೊಂಡಿದ್ದರಂತೆ.

ಅದರಂತೆ ಇಂದು ಹರಕೆಯನ್ನು ತೀರಿಸಲಾಗುತ್ತಿದೆ‌. ಮುಂಜಾನೆಯೇ ದೇವಿಗೆ ವಿಶೇಷ ಪೂಜೆ ಸಲ್ಲಿಸಿರೋ ಗ್ರಾಮಸ್ಥರು, ಬಲಿಕೊಟ್ಟಿರೋ ನಾಟಿ ಕೋಳಿಗಳನ್ನು ಸ್ವಚ್ಛಗೊಳಿಸಿ, ಆಹಾರ ಸಿದ್ಧಪಡಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಗ್ರಾಮಸ್ಥರಿಗೆ ಬಿಸಿ ಬಿಸಿ ರಾಗಿ ಮುದ್ದೆ ಜೊತೆಗೆ ನಾಟಿ ಕೋಳಿ‌ ಸಾಂಬಾರ್ ರುಚಿಯೂ ಸಿಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com