ಮೈತ್ರಿ ಸರ್ಕಾರ ಅದಾಗಿಯೇ ಬೀಳುವವರೆಗೆ BJP ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ : ಸಿ.ಟಿ ರವಿ

ಒಂದು ಹೊಟ್ಟೆ ತುಂಬೋವರ್ಗೂ ಅಥವ ಹಿಟ್ಟು ಖಾಲಿಯಾಗೋವರ್ಗೂ ಈ ಸರ್ಕಾರ ಇರಬಹುದು. ಆದ್ರೆ, ಒಂದಂತ್ತು ಬಹಳ ಸ್ಪಷ್ಟ ಈ ಸರ್ಕಾರ ಅದಾಗೇ ಬೀಳೋವರ್ಗೂ ನಾವು ಸರ್ಕಾರ ಬೀಳಿಸುವ ಕೆಲಕ್ಕೆ ಕೈ ಹಾಕಲ್ಲ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು ಮಾತನಾಡಿದ ಅವ್ರು, ಜನರ ಬಯಕೆಯಲ್ಲೂ ಈ ಸರ್ಕಾರ ಇರಬೇಕೆಂದು ಇಲ್ಲ. ಅಷ್ಟೆ ಅಲ್ಲದೆ, ಇರಬೇಕೆಂಬ ರೀತಿಯಲ್ಲಿ ಕೆಲಸ, ಕಾರ್ಯಗಳನ್ನ ಈ ಸರ್ಕಾರ ಮಾಡ್ತಾನೂ ಇಲ್ಲ. ನಾನು ಮೊದಲೇ ಹೇಳಿದಂತೆ ಹಿಟ್ಟು ಹಳಸಿತ್ತು, ನಾಯಿ ಕಾದಿತ್ತು ಎಂಬಂತಾಗಿದೆ. ಆದ್ರೆ, ಸರ್ಕಾರ ಬೀಳಿಸುವ ಕೆಲಸಕ್ಕೆ ಬಿಜೆಪಿ ಕೈ ಹಾಕಲ್ಲ ಎಂದು ಮೈತ್ರಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಸಿ.ಟಿ. ರವಿ, ವಿವೇಕಾನಂದರದ್ದು ಆಕಸ್ಮಿಕ ಸಾವಲ್ಲ, ಕೊಲೆ ಎಂಬ ಭಗವಾನರ ಹೇಳಿಕೆಗೂ ತಿರುಗೇಟು ನೀಡಿದ ಅವರು, ಕೆಲವರು ಪ್ರಚಾರದಲ್ಲಿ ಇರಲು ಹಾಗೂ ನಮಗೆ ಈ ರೀತಿಯೂ ಬುದ್ಧಿ ಭ್ರಮಣೆಯಾಗಿದೆ ಎಂದು ತೋರಿಸೋದಕ್ಕೆ ಕೆಲ ಹೇಳಿಕೆಯನ್ನ ಕೊಡ್ತಿರ್ತಾರೆ. ಆದ್ರೆ, ಭಗವಾನ್ ಹೇಳಿಕೆ ಹೊಸದೇನಲ್ಲ ಎಂದು ಭಗವನ್ ವಿರುದ್ಧ ಕಿಡಿಕಾರಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com