ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲಿ : ದಿಂಗಾಲೇಶ್ವರ ಸ್ವಾಮೀಜಿ ಆಗ್ರಹ

‘ ಉತ್ತರ ಕರ್ನಾಟಕ ಭಾಗದ ನದಿಗಳ ಸದ್ಬಳಕೆ ಮಾಡಿ ಬಯಲು ನಾಡಿನ ಬರ ನೀಗಿಸಲು ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಲಿ ‘ ಎಂದು ಬಾಳೆ ಹೊಸೂರಿನ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಶ್ರೀಗಳು ‘ ಸರ್ಕಾರಗಳು ಪ್ರತ್ಯೇಕತೆ ಹುಟ್ಟು ಹಾಕದೆ ಏಕತೆ ತರುವ ಪ್ರಯತ್ನ ಮಾಡಲಿ. ಪ್ರತ್ಯೇಕ ರಾಜ್ಯ, ಧರ್ಮ ಹುಟ್ಟುಹಾಕುವ ಮಾತು ಕೈ ಬಿಟ್ಟು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ನೀಡಲು ಚಿಂತನೆ ಮಾಡಲಿ ‘ ಎಂದು ಹೇಳಿದರು

‘ ಉತ್ತರ ಕರ್ನಾಟಕ ಭಾಗಕ್ಕೆ ಎಷ್ಟು ಹಣ ನೀಡಿದರೂ ಅಭಿವೃದ್ದಿ ಬಾಕಿ ಉಳಿಯುತ್ತೆ. ಅಷ್ಟು ಹಿಂದುಳಿದ ಭಾಗ ಉತ್ತರ ಕರ್ನಾಟಕ. ಈ ದೃಷ್ಟಿಯಿಂದ ಪ್ರತ್ಯೇಕ ಬಜೆಟ್ ಮಂಡನೆ ಮಾಡುವುದು ಸರಿ ‘ ಎಂದು ಸೂಚಿಸಿದರು.

‘ ಮಲೆನಾಡು, ಕರಾವಳಿಯಲ್ಲಿ ಹರಿದ ನದಿಗಳ ನೀರು ಎರಡೂ ದಂಡೆಗಳಲ್ಲಿ ಬಳಸಿ ಹೆಚ್ಚುಳಿದರೆ ಮಾತ್ರ ಬಯಲು ಸೀಮಿಗೆ ಕೊಂಡಯ್ಯಲಿ. ಇದರಿಂದ ಮಲೆನಾಡು ಭಾಗಕ್ಕೂ ಅನ್ಯಾಯ ಆಗದು, ಬಯಲು ಸೀಮಿಗೂ ಒಳಿತಾಗಲಿದೆ ‘ ಎಂದು ನೀರನ್ನು ಬಯಲು ಸೀಮೆಗೆ ಕೊಂಡೊಯ್ಯೋ ವಿಚಾರಕ್ಕೆ ಶ್ರೀಗಳ ಪ್ರತಿಕ್ರಿಯೆ‌ ನೀಡಿದರು.

Leave a Reply

Your email address will not be published.

Social Media Auto Publish Powered By : XYZScripts.com