ಶಿವಮೊಗ್ಗ : ಅರಣ್ಯ ಇಲಾಖೆ ಅಧಿಕಾರಿಗಳಿಂದ ನಟೋರಿಯಸ್ ಜಿಂಕೆ ಕಳ್ಳನ ಬಂಧನ..!

ಸೋಮವಾರ ರಾತ್ರಿ ಶಿವಮೊಗ್ಗ ವನ್ಯಜೀವಿ ವಿಭಾಗದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಹಣಗೆರೆ ವಲಯದ ತಮ್ಮಡಿಹಳ್ಳಿಯಲ್ಲಿ ನಟೋರಿಯಸ್ ಜಿಂಕೆ ಕಳ್ಳನನ್ನು ಬಂಧಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್ ಕೆ ಚಂದ್ರಶೇಖರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್ ಡಿ ಪುಟ್ಟನಹಳ್ಳಿ ಇವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗೆ ಇಳಿದ ಹಣಗೆರೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಕೆ ರವಿ ಅವರು ನಟೋರಿಯಸ್ ಜಿಂಕೆ ಬೇಟೆಯಾಡಿ ಮಾಂಸ ಮಾರುತ್ತಿದ್ದ ರಾಜು ( 25) ಎಂಬತನನ್ನು ಜಿಂಕೆ ತಲೆ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವೇಳೆ ಹಣಗೆರೆ ಅರಣ್ಯ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com