ಮೋಟಾರು ಕಾಯ್ದೆ ವಿರೋಧಿಸಿ ಬಂದ್ : ಮುಷ್ಕರಕ್ಕೆ ಸಿಗದ ಬೆಂಬಲ, ವಾಹನ ಸಂಚಾರ ಎಂದಿನಂತೆ
ಕಲಬುರ್ಗಿ : ಕೇಂದ್ರ ಸರ್ಕಾರದ ನೂತನ ಮೋಟಾರು ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ಕಲಬುರ್ಗಿ ಜಿಲ್ಲೆಯಲ್ಲಿ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿಲ್ಲ. ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಎಂದಿನಂತೆ ಬಸ್ ಗಳ ಕಾರ್ಯ ನಿರ್ವಹಿಸುತ್ತಿವೆ. ವಾಹನಗಳು ಎಂದಿನಂತೆ ಬೀದಿಗಿಳಿದಿರುವುದರಿಂದ ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ.
ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಮುಷ್ಕರಕ್ಕಿಲ್ಲ ಬೆಂಬಲ ದೊರೆತಿಲ್ಲ. ವಾಹನಗಳು ಎಂದಿನಂತೆ ರಸ್ತೆಯಲ್ಲಿ ಸಂಚರಿಸುತ್ತಿವೆ. CITU ಮುಷ್ಕರಕ್ಕೆ ಕರೆ ನೀಡಿದ್ದರೂ ಸಹ ನೌಕರರು ಮುಷ್ಕರಕ್ಕೆ ಬೆಂಬಲಿಸಿಲ್ಲ.
ಕೊಡಗು : ಸಾರಿಗೆ ಮುಷ್ಕರ ಬಿಸಿ ಕೊಡಗು ಜಿಲ್ಲೆಗೆ ತಟ್ಟಿಲ್ಲ. ಎಂದಿನಂತೆ ಬಸ್ ಗಳು ರಸ್ತೆಗಿಳಿದಿದ್ದು, ಆಟೋ, ಟ್ಯಾಕ್ಸಿಗಳ ಸಂಚಾರಕ್ಕೂ ಮುಷ್ಕರದಿಂದ ಯಾವುದೇ ಅಡ್ಡಿಯಾಗಿಲ್ಲ.
ಬೆಳಗಾವಿ : ಕುಂದಾನಗರಿ ಬೆಳಗಾವಿಗೆ ಸಾರಿಗೆ ಬಂದ್ ನ ಬಿಸಿ ತಟ್ಟಿಲ್ಲ, ಬೆಳಗಾವಿಯಲ್ಲಿ ಸಂಚಾರ ವ್ಯವಸ್ಥೆ ಎಂದಿನಂತಿದೆ. ಸಾರಿಗೆ ಬಂದ್ ಗೆ ಸಾರಿಗೆ ಸಂಸ್ಥೆ ನೌಕರರು ಬೆಂಬಲ ನೀಡಿಲ್ಲ. ಬಸ್ ಸಂಚಾರದಲ್ಲಿ ಯಾವುದೇ ವ್ಯತಯ ಉಂಟಾಗಿಲ್ಲ.
Desse jeito, é mais fácil perder peso e gordura corporal. http://www.Ideafit.com/profile/atchley-aichele