ಚಿಕ್ಕಬಳ್ಳಾಪುರ : ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿತ – ಅದೃಷ್ವವಶಾತ್ ಪಾರಾದ ಮಕ್ಕಳು..

ಚಿಕ್ಕಬಳ್ಳಾಪುರ : ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಅದೃಷ್ಟವಶಾತ್ ಅವಘಡದಿಂದ ಮಕ್ಕಳು ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿಯ ಅಂಗಡಿನವಾಡಿ ಕೇಂದ್ರದಲ್ಲಿ ನಡೆದಿದೆ.

ಅಂಗನವಾಡಿ ಕೇಂದ್ರದ ಬಾಗಿಲು ತೆರೆಯುವ ಮುನ್ನ ಅವಘಡ ನಡೆದಿದ್ದು, ಮಕ್ಕಳು ಅಂಗನವಾಡಿ ಕೇಂದ್ರದಲ್ಲಿ ಇರದ ವೇಳೆ ಮೇಲ್ಛಾವಣಿ ಕುಸಿದಿದೆ. ಮೇಲ್ಛಾವಣಿ ಕುಸಿತದಿಂದ ಆಡುಗೆ ಪಾತ್ರೆಗಳಿಗೆ ಹಾನಿಯುಂಟಾಗಿದೆ. ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನ ಕಳಿಸಲು ಪೋಷಕರಲ್ಲಿ ಹೆದರಿಕೆ ಮೂಡಿದೆ..

ಕಳಪೆ ಕಾಮಗಾರಿಯಿಂದ ಮೇಲ್ಛಾವಣಿ ಕುಸಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳಪೆ ಕಟ್ಟಡ ಕೆಡವಿ ಹೊಸ ಅಂಗನವಾಡಿ ಕೇಂದ್ರ ಕಟ್ಟುವಂತೆ ಆಗ್ರಹಿಸಿದ್ದಾರೆ.

One thought on “ಚಿಕ್ಕಬಳ್ಳಾಪುರ : ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿತ – ಅದೃಷ್ವವಶಾತ್ ಪಾರಾದ ಮಕ್ಕಳು..

Leave a Reply

Your email address will not be published.

Social Media Auto Publish Powered By : XYZScripts.com