ಸ್ವಾಮಿ ವಿವೇಕಾನಂದ ಮತ್ತ ಬಸವಣ್ಣನವರನ್ನು ಪಿತೂರಿ ಮಾಡಿ ಕೊಲ್ಲಲಾಗಿದೆ : ಕೆ.ಎಸ್ ಭಗವಾನ್

‘ ಸ್ವಾಮಿ ವಿವೇಕಾನಂದ ಹಾಗೂ ಬಸವಣ್ಣನವರನ್ನು ಪಿತೂರಿ ಮಾಡಿ ಕೊಲ್ಲಲಾಗಿದೆ ‘ ಎಂದು ಪ್ರಗತಿಪರ ಚಿಂತಕ, ಹಿರಿಯ ಸಾಹಿತಿ ಪ್ರೊಫೆಸರ್ ಕೆ.ಎಸ್ ಭಗವಾನ್ ಅವರು ಮೈಸೂರಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ ಸ್ವಾಮಿ ವಿವೇಕಾನಂದರು ಬೌದ್ಧ ಧರ್ಮದ ವಿಚಾರ ಧಾರೆಗಳ ಕುರಿತು ಮಾತನಾಡಲಾರಂಭಿಸಿದ್ದರು. ಆ ಬಳಿಕವೇ ಅವರನ್ನು ಕತ್ತು ಹಿಸುಕಿ ಕೊಂದಿರುವ ಅನುಮಾನವಿದೆ. ಯುವಕರಾಗಿದ್ದ ಸ್ವಾಮಿ ವಿವೇಕಾನಂದರು ಏಕಾಏಕಿ ಸಹಜ ಸಾವನ್ನಪ್ಪಲು ಸಾಧ್ಯವೇ ಇಲ್ಲಾ. ಅವರನ್ನು ಕೊಲ್ಲಲಾಗಿದೆ ‘ ಎಂದಿದ್ದಾರೆ.

‘ ಆದೇ ರೀತಿ ಬಸವಣ್ಣನವರನ್ನು ಕೊಲೆ ಮಾಡಲಾಗಿದೆ. ಬಸವಣ್ಣನವರ ವಚನ ಚಳವಳಿಯನ್ನು ಸಹಿಸದವರು ಅವರನ್ನು ಕೊಂದಿದ್ದಾರೆ. ಬಸವಣ್ಣನವರು ಕೂಡಲ ಸಂಗಮದ ಕಲ್ಯಾಣದಲ್ಲಿ ಐಕ್ಯರಾದರೆಂಬುದು ಶುದ್ದ ಸುಳ್ಳು. ಜಾತಿ ವ್ಯವಸ್ಥೆ ವಿರುದ್ಧ ಚಳುವಳಿ ಹುಟ್ಟು ಹಾಕಿದವರು ಬಸವಣ್ಣನವರು. ಅಂತಹ ಬಸವಣ್ಣ ಏಕೆ ಐಕ್ಯರಾಗಿ ಸಾಯುತ್ತಾರೆ ಹೇಳಿ ? ಕೈಲಾಸ, ಸ್ವರ್ಗ ಎಂಬುದು ಏನೂ ಇಲ್ಲಾ ‘ ಎಂದು ಭಗವಾನ್ ಪ್ರತಿಪಾದಿಸಿದ್ದಾರೆ.

Leave a Reply

Your email address will not be published.