ಛತ್ತೀಸ್‍ಗಢದಲ್ಲಿ ರಕ್ಷಣಾ ಪಡೆಗಳ ಎನ್‍ಕೌಂಟರ್ : 15 ಮಾವೋವಾದಿಗಳ ಹತ್ಯೆ – ಶಸ್ತಾಸ್ತ್ರ ವಶ

ಛತ್ತೀಗಢದಲ್ಲಿ ರಕ್ಷಣಾ ಪಡೆಗಳು ಸೋಮವಾರ ನಡೆಸಿದ ಎನ್ ಕೌಂಟರ್ ದಾಳಿಯಲ್ಲಿ 14 ಮಾವೋವಾದಿಗಳು ಹತರಾಗಿದ್ದಾರೆ. ಛತ್ತೀಸ್ ಗಢದ ಬಸ್ತಾರ್ ಜಿಲ್ಲೆಯ ಗೊಲ್ಲಪ್ಪಳ್ಳಿ ಮತ್ತು ಕೊಂಟಾ ಹಳ್ಳಿಗಳ ನಡುವೆ ಇರುವ ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದ್ದು, 16 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಕ್ಷಣಾ ಪಡೆಗಳ ತಂಡವೊಂದು ಕಾಡಿನಲ್ಲಿ ಶೋಧ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ಮಾವೋವಾದಿಗಳು ರಕ್ಷಣಾ ಪಡೆಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ್ದರಿಂದ, ಎನ್ ಕೌಂಟರ್ ನಡೆಸಲಾಗಿದೆ ‘ ಎಂದು ಬಸ್ತಾರ್ ಪ್ರದೇಶ ಐಜಿಪಿ ವಿವೇಕಾನಂದ ಸಿನ್ಹಾ ತಿಳಿಸಿದ್ದಾರೆ.

‘ ಎನಕೌಂಟರ್ ನಡೆಸಲಾಗಿರುವ ಪ್ರದೇಶದಲ್ಲಿ ಹಲವು ಮಾವೋವಾದಿಗಳು ಇದ್ದಾರೆ ಎಂಬ ಗುಪ್ತಚರ ದಳದ ಮಾಹಿತಿಯ ಮೇರೆಗೆ ಶೋಧ ಕಾರ್ಯಚರಣೆ ಕೈಗೊಳ್ಳಲಾಗಿತ್ತು. ಸಿಆರ್ ಪಿಎಫ್, ಡಿಸ್ಟ್ರಿಕ್ಟ್ ರಿಸರ್ವ್ ಪೋಲೀಸ್ ಹಾಗೂ ಸ್ಪೆಷಲ್ ಟಾಸ್ಕ್ ಫೋರ್ಸ್ ಗಳ ತಂಡಗಳು ಆಪರೇಶನ್ ನಡೆಸಿದ್ದರು ‘ ಎಂದು ಪೋಲೀಸರು ತಿಳಿಸಿದ್ದಾರೆ.

 

Leave a Reply

Your email address will not be published.