ಕೇರಳ : ಚಾಕುವಿನಿಂದ ಇರಿದು CPI(M) ಕಾರ್ಯಕರ್ತನ ಬರ್ಬರ ಹತ್ಯೆ..

ಕಾಸರಗೋಡಿನ ಉಪ್ಪಳದಲ್ಲಿ ಸಿಪಿಐಎಂ ಕಾರ್ಯಕರ್ತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಉಪ್ಪಳ ಸೋಂಕಾಲ್ ನ ನಿವಾಸಿಯಾದ 21 ವರ್ಷದ ಅಬೂಬಕ್ಕರ್ ಸಿದ್ದೀಕ್ ಕೊಲೆಗೀಡಾಗಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ಸೋಂಕಾಲಿನಲ್ಲಿ ಈ ಘಟನೆ ನಡೆದಿದ್ದು, ಎರಡು ಬೈಕಿನಲ್ಲಿ ಬಂದಿದ್ದ ತಂಡದವರು ಕೃತ್ಯ ಎಸಗಿದ್ದಾರೆ.

ಕೃತ್ಯದ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿಯ ಕೈವಾಡವಿದೆ ಎಂದು ಸಿಪಿಐಎಂ ಮುಖಂಡರು ಆರೋಪಿಸಿದ್ದಾರೆ. ಅಬೂಬಕ್ಕರ್ ಸಿದ್ದೀಕ್ ಕೊಲ್ಲಿ ರಾಷ್ಟ್ರ ಕತಾರ್ ನಲ್ಲಿ ಉದ್ಯೋಗದಲ್ಲಿದ್ದ. ಹತ್ತು ದಿವಸಗಳ ಹಿಂದೆ ಊರಿಗೆ ಬಂದಿದ್ದ.

Leave a Reply

Your email address will not be published.