ಕೊಪ್ಪಳ : ವಿಷಪೂರಿತ ಹಣ್ಣು ತಿಂದು 10 ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು..

ಕೊಪ್ಪಳ : ವಿಷ ಪೂರಿತ ಹಣ್ಣು ತಿಂದು 10 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಡಕಿ ಸಮೀಪದ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಬಸವರಾಜ, ಸರಸ್ವತಿ, ಶರಣಮ್ಮ, ಶಿವು, ಶಾಂತಮೂರ್ತಿ, ವಡಿಕೆಪ್ಪ, ದೊಡ್ಡಬಸವರಾಜ, ಹನುಮೇಶ, ಶೃತಿ, ಸಂತೋಷ ಅಸ್ವಸ್ಥಗೊಂಡಿದ್ದು, ಕನಕಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ಕು ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳೂರು ಮೂಲದ ಗಿಡದ ಹಣ್ಣು ತಿಂದು ಅಸ್ವಸ್ಥಗೊಂಡಿದ್ದಾರೆ. ಮನೆ ಮುಂದೆ ಕಳೆದ ಎಂಟತ್ತು ವರ್ಷದ ಹಿಂದೆ ಸಸಿಯನ್ನು ತಂದು ಬೆಳೆಸಲಾಗಿತ್ತು. ಈಗ ಸುಂದರವಾದ ಹೂ, ಕಾಯಿ ಬಿಟ್ಟುದ್ದನ್ನ ಕಂಡ ಮಕ್ಕಳು, ಕಾಯಿ ಹರಿದು ಒಳಗಿನ ಬೀಜ ತಿಂದು ಅಸ್ವಸ್ಥರಾಗಿದ್ದಾರೆ.

ವಾಂತಿ, ಬೇದಿಯಿಂದ ಅಸ್ವಸ್ಥರಾಗಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com