WATCH : ಗಾಲ್ಫ್ ಆಡಲು ಹೋಗಿ ಎಡವಟ್ಟು ಮಾಡಿಕೊಂಡ ವೇಗಿ ಆ್ಯಂಡರ್ಸನ್.! ಆಗಿದ್ದೇನು.?

ಎಡ್ಜ್ ಬಾಸ್ಟನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 31 ರನ್ ಗಳಿಂದ ಜಯ ಗಳಿಸಿತ್ತು. ಗೆಲುವಿನ ಬಳಿಕ ಇಂಗ್ಲೆಂಡ್ ಆಟಗಾರರು ವಿಶ್ರಾಂತಿಯ ಮೂಡ್ ನಲ್ಲಿದ್ದು, ವೇಗಿಗಳಾದ ಸ್ಟುವರ್ಟ್ ಬ್ರಾಡ್ ಹಾಗೂ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಗಾಲ್ಫ್ ಆಡಲು ತೆರಳಿದ್ದಾರೆ.

‘ ಕಿಂಗ್ ಆಫ್ ಸ್ವಿಂಗ್ ‘ ಎಂದೇ ಖ್ಯಾತಿಯಾಗಿರುವ ಜೇಮ್ಸ್ ಆ್ಯಂಡರ್ಸನ್ ಗಾಲ್ಫ್ ಆಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ಗಾಲ್ಫ್ ಸ್ಟಿಕ್ ನಿಂದ ಬಾರಿಸಿದ ಚೆಂಡು ಮರಕ್ಕೆ ತಗುಲಿ, ಮರಳಿ ಬಂದು ಆ್ಯಂಡರ್ಸನ್ ಮುಖಕ್ಕೆ ಬಡಿದಿದೆ. ಅದೃಷ್ಟವಶಾತ್ ಇಂಗ್ಲೆಂಡ್ ವೇಗಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ.

ಆ್ಯಂಡರ್ಸನ್ ಗಾಲ್ಫ್ ಆಡುತ್ತಿರುವ ಈ ವಿಡಿಯೋವನ್ನು ಸ್ಟುವರ್ಟ್ ಬ್ರಾಡ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಭಯ ಪಡುವ ಅಗತ್ಯವಿಲ್ಲ, ಜೇಮ್ಸ್ ಆ್ಯಂಡರ್ಸನ್ ಸುರಕ್ಷಿತರಾಗಿದ್ದಾರೆ ಎಂದು ಬ್ರಾಡ್ ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com