ದೆಹಲಿಗೆ ತೆರಳುತ್ತಿದ್ದ ಉಗ್ರನ ಬಂಧನ : 8 ಗ್ರೆನೇಡ್ ವಶಕ್ಕೆ – ಸ್ಫೋಟದ ಸಂಚು ಬಯಲು

ದೇಶದ ರಾಜಧಾನಿ ದೆಹಲಿಯತ್ತ ಸ್ಫೋಟಕ ಸಾಮಗ್ರಿಗಳೊಂದಿಗೆ ಸಾಗುತ್ತಿದ್ದ ಓರ್ವ ಉಗ್ರನನ್ನು ಜಮ್ಮುವಿನ ಗಾಂಧಿನಗರ ಪ್ರದೇಶದಲ್ಲಿ ರವಿವಾರ ಬಂಧಿಸಲಾಗಿದೆ. ದಕ್ಷಿಣ ಕಾಶ್ಮೀರದ ದಂಗರ್ಪೊರಾ-ಅವಂತಿಪೊರಾ ಹಳ್ಳಿಯಯವನಾದ ಇರ್ಫಾನ್ ಹುಸೇನ್ ವಾನಿ ಎಂಬಾತನನ್ನು ಬಂಧಿಸಲಾಗಿದ್ದು, ಅವನ ಬಳಿಯಿದ್ದ 8 ಗ್ರೆನೇಡ್ ಹಾಗೂ 60,000 ರೂಪಾಯಿಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

‘ ತನ್ನೊಂದಿಗೆ 8 ಗ್ರೆನೇಡ್ ಗಳನ್ನು ಸಾಗಿಸುತ್ತಿದ್ದ ಈತ, ದೆಹಲಿಯಲ್ಲಿರುವ ಪರಿಚಯದ ವ್ಯಕ್ತಿಯೊಬ್ಬರಿಗೆ ಹಸ್ತಾಂತರಿಸುವ ಯೋಜನೆ ಹೊಂದಿದ್ದ, ಸ್ವಾತಂತ್ರ್ಯ ದಿನಾಚರಣೆಯ ಪೂರ್ವದಲ್ಲಿ ಅಶಾಂತಿ ಉಂಟು ಮಾಡಲು ಸಂಚು ರೂಪಿಸಲಾಗಿತ್ತು ‘ ಎಂದು ಜಮ್ಮು ಐ.ಜಿ ಜಾಮ್ವಾಲ್ ಅವರು ತಿಳಿಸಿದ್ದಾರೆ.

ಜಾಕೀರ್ ಮೂಸಾ ಮುಂದಾಳತ್ವದ ಅನ್ಸಾರ್ ಘಜವತ್ – ಉಲ್ – ಹಿಂದ್ ಸಂಘಟನೆಯೊಂದಿಗೆ ನಂಟು ಹೊಂದಿರುವುದಾಗಿ ತಿಳಿಸಿದ್ದು, ಸಂಘಟನೆಯ ಪ್ರಮುಖರಲ್ಲಿ ಒಬ್ಬನಾದ ರೆಹಾನ್ ಜೊತೆ ಸಂಪರ್ಕದಲ್ಲಿರುವುದಾಗಿ ವಿಚಾರಣೆಯ ವೇಳೆ ಬಂಧಿತ ಉಗ್ರ ಬಾಯಿಬಿಟ್ಟಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com