ಚಿಕ್ಕಮಗಳೂರು : ನೀರಿನ ಟ್ಯಾಂಕಿನಲ್ಲಿದ್ದ 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ನೇಕ್ ಆರಿಫ್..!

ಮನೆಯ ನೀರಿನ ಟ್ಯಾಂಕರ್‍ನೊಳಗಿದ್ದ ಸುಮಾರು 18 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ರಕ್ಷಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗುತ್ತಿಹೆಸಗೋಡು ಗ್ರಾಮದಲ್ಲಿ ನಡೆದಿದೆ. ಹೆಸಗೋಡು ಗ್ರಾಮದ ಮಹೇಂದ್ರ ಎಂಬ ವಕೀಲರ ಮನೆಯ ಈ ಟ್ಯಾಂಕರ್‍ನಲ್ಲಿ ಈ ಕಾಳಿಂಗ ಪತ್ತೆಯಾಗಿದೆ.

ಕಾಳಿಂಗ ಹಾಗೂ ಕಾಳಿಂಗನ ಗಾತ್ರವನ್ನ ನೋಡಿದ ಕೂಡಲೇ ಗಾಬರಿಗೊಂಡ ಮನೆಯವ್ರು ಕೂಡಲೇ ಸ್ನೇಕ್ ಆರೀಫ್‍ಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಹಾಗೂ ಅರಣ್ಯ ಸಿಬ್ಬಂದಿಗಳು ಸುಮಾರು 45 ನಿಮಿಷಗಳ ಕಾಲ ಹರಸಾಹಸಪಟ್ಟು ಹಾವನ್ನ ಸೆರೆ ಹಿಡಿದಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿದ ಬಳಿಕ ಮನೆಯವ್ರು ನಿಟ್ಟುಸಿರು ಬಿಟ್ಟಿದ್ದಾರೆ.

ಸೆರೆಯಾದ ಕಾಳಿಂಗನನ್ನ ಮನೆಯ ಮುಂದೆಯೇ ಸ್ವಲ್ಪಹೊತ್ತು ಆಡಿಸಿ ಬೃಹತ್ ಕಾಳಿಂಗನನ್ನ ಕಂಡು ಗಾಬರಿಯಾದ ಸ್ಥಳಿಯರು ಫೋಟೋಗಳನ್ನ ತೆಗೆದುಕೊಂಡ ಬಳಿಕ ಕಾಳಿಂಗನನ್ನ ಅರಣ್ಯ ಇಲಾಖೆ ನೇತೃತ್ವದಲ್ಲಿ ಸ್ಥಳಿಯ ಚಾರ್ಮಾಡಿ ಆರಣ್ಯಕ್ಕೆ ಬಿಟ್ಟಿದ್ದಾರೆ.

One thought on “ಚಿಕ್ಕಮಗಳೂರು : ನೀರಿನ ಟ್ಯಾಂಕಿನಲ್ಲಿದ್ದ 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ನೇಕ್ ಆರಿಫ್..!

Leave a Reply

Your email address will not be published.

Social Media Auto Publish Powered By : XYZScripts.com