ಸಮರ್ಥನೆಗಾಗಿ ಸಂಪರ್ಕ ಅಭಿಯಾನ : ಧೋನಿಯನ್ನು ಭೇಟಿಯಾದ ಅಮಿತ್ ಶಾ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮರ್ಥನೆಗಾಗಿ ಸಂಪರ್ಕ ಅಭಿಯಾನದ ಅಂಗವಾಗಿ ನವದೆಹಲಿಯಲ್ಲಿ ರವಿವಾರ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಭೇಟಿಯಾಗಿದ್ದಾರೆ. ಧೋನಿ ಭೇಟಿಯ ವೇಳೆ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಹಾಗೂ ಇನ್ನಿತರ ಮುಖಂಡರು ಅಮಿತ್ ಶಾ ಅವರ ಜೊತೆಗಿದ್ದರು. ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಕೇಂದ್ರ ಸರ್ಕಾರದ ಕೆಲಸಗಳ ಕುರಿತು ಅಮಿತ್ ಶಾ ಧೋನಿಯವರೊಂದಿಗೆ ಮಾತನಾಡಿದರು.

Image result for dhoni amit shah met

‘ ಸಮರ್ಥನೆಗಾಗಿ ಸಂಪರ್ಕ ಅಭಿಯಾನದ ಅಂಗವಾಗಿ ಕ್ರಿಕೆಟ್ ಆಟದ ಅತ್ಯುತ್ತಮ ಫಿನಿಷರ್ ಗಳಲ್ಲಿ ಒಬ್ಬರಾಗಿರುವ ಧೋನಿಯವರನ್ನು ಭೇಟಿಯಾದೆವು. ಈ ವೇಳೆ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿರುವ ಅಭೂತಪೂರ್ವ ಕೆಲಸ ಹಾಗೂ ಪರಿವರ್ತಕ ಯೋಜನೆಗಳ ಬಗ್ಗೆ ಮಾತನಾಡಿದೆವು ‘ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com