ಮೋದಿಯನ್ನ ಭೇಟಿ ಮಾಡಿದ ತೆಲಂಗಾಣ ಸಿಎಂ : ಚುನಾವಣೋತ್ತರ ಮೈತ್ರಿಗೆ ಟಿಆರ್ ಎಸ್ ಮುಕ್ತ..!

ಹೈದರಾಬಾದ್ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿಗೆ ತಮ್ಮ ಟಿಆರ್ ಎಸ್ ಪಕ್ಷ ಮುಕ್ತವಾಗಿದೆ ಎಂದು ತೆಲಂಗಾಣ ಸಿಎಂ ಮತ್ತು ಟಿಆರ್ ಎಸ್ ಪಕ್ಷದ ಅಧಿನಾಯಕ ಕೆ ಚಂದ್ರಶೇಖರರಾವ್ ತಿಳಿಸಿದ್ದಾರೆ. 

ನವದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ 2019ರ ಚುನಾವಣೆ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿದುಬಂದಿದೆ.  ಚುನಾವಣೋತ್ತರ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆಯಾದರೆ ಟಿಆರ್‌ಎಸ್‌ ಬೆಂಬಲಿಸಲು ಸಿದ್ಧ ಎಂಬ ಸಂದೇಶ ರವಾನೆಯಾಗಿದೆ.

ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮತದಾನ ಪ್ರಕ್ರಿಯೆಯಿಂದ ದೂರ ಸರಿಯುವ ಮೂಲಕ ಪರೋಕ್ಷವಾಗಿ ಟಿಆರ್‌ಎಸ್‌ ಮೋದಿ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಎನ್ ಡಿಎ ಮೈತ್ರಿಕೂಟದದಿಂದ ಟಿಡಿಪಿ ಹಿಂದೆ ಸರಿದ ಬಳಿಕ ಬಿಜೆಪಿ ಈಗ ಟಿಆರ್ ಎಸ್‌ನೊಂದಿಗೆ ನಿಕಟತೆ ಹೊಂದಲು ಯತ್ನಿಸುತ್ತಿದೆ ಎನ್ನಲಾಗಿದ್ದು.  ಅವಿಶ್ವಾಸ ಮತದ ಸಂದರ್ಭ ನಡೆದ ಚರ್ಚೆ ವೇಳೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಟೀಕಿಸಿದ್ದರು. 

Leave a Reply

Your email address will not be published.

Social Media Auto Publish Powered By : XYZScripts.com