BWF ವಿಶ್ವ ಚಾಂಪಿಯನ್‍ಷಿಪ್ : ಫೈನಲ್‍ನಲ್ಲಿ ಸೋಲು – ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡ ಸಿಂಧು

ರವಿವಾರ ನಡೆದ ಬಿಡಬ್ಲ್ಯೂ ವಿಶ್ವಚಾಂಪಿಯನ್ ಷಿಪ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಪೇನ್ ದೇಶದ ಕೆರೋಲಿನ್ ಮರೀನ್ ಎದುರು ಭಾರತದ ಪಿ.ವಿ ಸಿಂಧು ಪರಾಭವಗೊಂಡಿದ್ದಾರೆ. ಕೆರೋಲಿನ್ ಮರೀನ್ ಚಿನ್ನಕ್ಕೆ ಕೊರಳೊಡ್ಡಿದರೆ, ಸಿಂಧು ಬೆಳ್ಳಿ ಪದಕಕ್ಕೆ ತಪ್ತಿ ಪಟ್ಟುಕೊಂಡಿದ್ದಾರೆ.

Image result for sindhu silver BWF 2018

ಸಮಬಲದ ಹೋರಾಟದಿಂದ ಕೂಡಿದ ಮೊದಲ ಗೇಮ್ ನಲ್ಲಿ 21-19 ಪಾಯಿಂಟ್ ಗಳಿಂದ ಸಿಂಧು ಪರಾಭವಗೊಂಡರು. ಎರಡನೇ ಗೇಮ್ ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಮರೀನ್ 21 -10 ಪಾಯಿಂಟ್ ಗಳ ಅಂತರದಿಂದ ಗೆದ್ದರು. ಈ ಮೂಲಕ ಕೆರೋಲಿನ್ ಮರೀನ್ ಮೂರು ಸಲ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಷಿಪ್ ಗೆದ್ದ ಮೊದಲ ಆಟಗಾರ್ತಿ ಎನಿಸಿದರು.

ಕಳೆದ ವರ್ಷವೂ ಫೈನಲ್ ತಲುಪಿದ್ದ ಸಿಂಧು ನೊಜೊಮಿ ಓಕುಹಾರಾ ವಿರುದ್ಧ ಸೋಲುಂಡು ರಜತ ಪದಕ ಪಡೆದಿದ್ದರು. ಬಿಡಬ್ಲ್ಯೂ ಚಾಂಪಿಯನ್ ಷಿಪ್ ನಲ್ಲಿ ಸಿಂಧು ಎರಡು ಸಲ ಕಂಚಿನ ಪದಕ (2013 & 2014) ಎರಡು ಬಾರಿ ಬೆಳ್ಳಿ ಪದಕ (2017 & 2018) ಜಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com