ಬೆಂಗಳೂರು : ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ನಟ ಶಿವಣ್ಣ ದಂಪತಿ

ಬೆಂಗಳೂರು : ನಟ ಶಿವರಾಜಕುಮಾರ ಮತ್ತು ಅವರ ಧರ್ಮಪತ್ನಿ ಗೀತಾ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ಭೇಟಿಯಾಗಿದ್ದರೆ. ಸುಮಾರು ಅರ್ಧ ಗಂಟೆಗಳ ಕಾಲ  ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಮುಖ್ಯಮಂತ್ರಿ ಜೊತೆ ಮಾತನಾಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ನಟ ಶಿವರಾಜ್ ಕುಮಾರ, ಲೋಕಸಭಾ ಉಪಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೀತಾ ಕಣಕಿಳಿಯುವ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ, ಗೀತಾ ಅವರು ಸ್ಪರ್ಧಿಸಬೇಕು, ಗೆಲುವು ಸಾಧಿಸಬೇಕು ಎಂಬುದು ದೇವರ ಇಚ್ಛೆ ಇದ್ದರೆ ಯಾರು ತಪ್ಪಿಸುವುದಿಲ್ಲ ಎಂದು ತಿಳಿದಿದ್ದರು.       ಇನ್ನ ಮೈಸೂರಿನಲ್ಲಿ  ದಿ. ಪಾರ್ವತಮ್ಮರಾಜ್ ಕುಮಾರ್ ಅವರು ನಡೆಸುತ್ತಿದ್ದ ಶಾಂತಿಧಾಮದ ಅಭಿವೃಧಿ ಮತ್ತು ಶಾಲೆಯೊಂದನ್ನು ತೆರೆಯುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ನಟ ಶಿವರಾಜಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published.