ಹುಟ್ಟುಹಬ್ಬದಂದೇ ವಿಶೇಷ ಕೆಲಸಕ್ಕೆ ಸಹಿ ಹಾಕಿದ ಪ್ರಜ್ವಲ್ ರೇವಣ್ಣ….!..ಏನದು..?

ಹಾಸನ : ಸಚಿವ ಎಚ್ ಡಿ ರೇವಣ್ಣ ಪುತ್ರ  ಇಂದು  28 ವರ್ಷದ  ಹುಟ್ಟುಹಬ್ಬ ಅಚರಿಸಿಕೊಳ್ಳುತ್ತಿರುವ ಜೆಡಿಎಸ್ ಪಕ್ಷದ ಯುವ ಮುಖಂಡ ಹಾಗೂ ಸಚಿವ ಎಚ್‍ಡಿ ರೇವಣ್ಣ ಪುತ್ರ ತಮ್ಮ ಜನ್ಮದಿನದ ವಿಶೇಷವಾಗಿ ನೇತ್ರದಾನ ಮಾಡಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ತಮ್ಮ ನಿವಾಸಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಜ್ವಲ್ ರೇವಣ್ಣ, ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡರು. ಇಂದೇ ವಿಶೇಷವಾಗಿ ತಮ್ಮ ನೇತ್ರದಾನ ಮಾಡುವ ಪತ್ರಕ್ಕೆ ಸಹಿ ಹಾಕಿದ ಪ್ರಜ್ವಲ್ ಹಲವರಿಗೆ ಆದರ್ಶವಾದರು. ಕಾರ್ಯಕ್ರಮದ ವೇಳೆ ಪುತ್ರನಿಗೆ ಸಚಿವ ರೇವಣ್ಣ ಹಾಗೂ ಭವಾನಿ ರೇವಣ್ಣ ಶುಭಹಾರೈಸಿದರು.

ಪ್ರಜ್ವಲ್ ನೇತ್ರದಾನಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ನೂರಾರು ಅಭಿಮಾನಿಗಳು ಕೂಡ ನೇತ್ರದಾನ ಪತ್ರಕ್ಕೆ ಸಹಿ ಹಾಕಿದರು. ಬಳಿಕ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪ್ರಜ್ವಲ್ ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಕೇಕ್ ಕತ್ತರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಶುಭಹಾರೈಸಿದರು.

ಈ ವೇಳೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಜನರ ಮಧ್ಯೆ ಇರಲು ನನಗೆ ತುಂಬಾ ಸಂತೋಷವಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಕೆ ಮಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಮ್ಮ ರಾಜಕೀಯ ಜೀವನ ಕುರಿತು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೆನೆ. ಪಕ್ಷ ಸಂಘಟನೆಗಾಗಿ ಹೊಸ ಸಂಕಲ್ಪ ಮಾಡಿಕೊಂಡಿದ್ದೇನೆ. ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರ ಕುಂದು ಕೊರತೆ ವಿಚಾರಿಸುವ ಒಂದು ಅಂಶ ನನ್ನ ಮನಸ್ಸಿನಲ್ಲಿದೆ ಎಂದು ತಿಳಿಸದ್ದಾರೆ.

Leave a Reply

Your email address will not be published.