ಮೋದಿಗೆ ಯಾರೂ ಪ್ರತಿಸ್ಫರ್ಧಿ ಇಲ್ಲ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ : BSY

ಮುಂದಿನ ಲೋಕಸಭಾ ಚುನಾವಣೆಯಲ್ಲಿ‌ 22 ಸ್ಥಾನಗಳಲ್ಲಿ‌ ಗೆಲ್ಲುತ್ತೇನೆ. ನರೇಂದ್ರ ಮೋದಿಗೆ ಪ್ರತಿಸ್ಪರ್ಧಿ ಯಾರು ಇಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಮುಂದಿನ‌ ಲೋಕಸಭ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಬಹುಮತ ಬರಲಿದೆ ‘ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

‘ ಲೋಕಸಭೆ ಚುನಾವಣೆಗೆ ಸ್ಥಳಿಯ ಸಂಸ್ಥೆ ಚುನಾವಣೆ ಜೊತೆ ಜೊತೆ ಸಂಘಟನೆ ಮಾಡಲಾಗುತ್ತಿದೆ. ಇದೆ‌ ತಿಂಗಳು 9 ರಂದು ಎಲ್ಲಾ ಎಂಎಲ್ ಎ ಗಳ ಜೊತೆ ಸಭೆ ನಡೆಸುತ್ತೇವೆ ‘ ಎಂದಿದ್ದಾರೆ.

ಮೈಸೂರಿನಲ್ಲಿ ನಡೆಯುತ್ತಿರುವ ಬಸವಜಯಂತಿ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಎಂಎಲ್ ಎ ಮತ್ತು ಎಲ್ಲಾ ಸಂಸದರುಗಳಿಗೆ ಸನ್ಮಾನ ವಿಚಾರವಾಗಿ ಮಾತನಾಡಿದ ಅವರು ‘ ನನ್ನನ್ನು ಮುಖ್ಯಮಂತ್ರಿಯಾಗುವುದನ್ನ ತಪ್ಪಿಸಲು ಲಿಂಗಾಯತ ಪ್ರತ್ಯೇಕ ಹೋರಾಟ ಪ್ರಾರಂಭ ಮಾಡಿದ್ರು. ಈಗ ಪ್ರತ್ಯೇಕ ಧರ್ಮದ ಕೂಗು ಕಡಿಮೆಯಾಗಿದೆ. ಎಲ್ಲರು ಒಟ್ಟಾಗಿ ಹೋಗಬೇಕು ಎಂದು ತೀರ್ಮಾನ‌ ಮಾಡಿದ್ದಾರೆ. ಮುಂದೆ ಆ ರೀತಿ ಗೊಂದಲ ಮುಂದುವರೆಯುವುದಿಲ್ಲ ‘
ಮೈಸೂರಿನಲ್ಲಿ ಬಿಎಸ್ ವೈ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com