ಸಂಸತ್ ಸಮಯವನ್ನು ಹಾಳುಮಾಡಬೇಡಿ : ಜನರ ಅಭಿವೃದ್ಧಿಗಾಗಿ ಶ್ರಮಿಸಿ : ವೆಂಕಯ್ಯನಾಯ್ಡು

ನವದೆಹಲಿ : ರಾಜಕೀಯ ಹೊರಗಿಟ್ಟು, ಸಂಸತನಲ್ಲಿ ಜನರ ಅಭಿವೃದ್ಧಿಗಾಗಿ ಶ್ರಮಿಸಿ, ಸುಖಾ ಸುಮ್ಮನೆ ನಿರರ್ಥಕ ವಿಚಾರಗಳಿಗಾಗಿ ಸಂಸತ್ ಕಲಾಪದಲ್ಲಿ ಗಲಾಟೆ ಮಾಡುವ ಮೊಂಡು ಶಾಸಕರಿಗೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯನಾಯ್ಡು ಅವರು ಕಿಡಿಕಾರಿದ್ದಾರೆ.
ನೆನ್ನೆ ನಡೆದ ಕಲಾಪದಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ವೆಂಕಯ್ಯನಾಯ್ಡು ಅವರು, ಸಂಸತ್ ನಲ್ಲಿ ರಾಜಕೀಯ ವಿಚಾರಗಳ ಚರ್ಚೆ ಬೇಡ. ರಾಜಕೀಯವನ್ನು ಸಂಸತ್ ನಿಂದ ಹೊರಗಿಟ್ಟು ಕಲಾಪದಲ್ಲಿ ನಿಮ್ಮನ್ನು ಆರಿಸಿದ ಪ್ರಜೆಗಳಿಗಾಗಿ ಕಾರ್ಯನಿರ್ವಹಿಸಿ, ಅವರ ಅಭಿವೃದ್ಧಿ ಶ್ರಮಿಸಿ ಎಂದು ಸುಖಾಸುಮ್ಮನೆ ಗದ್ದಲದಿಂದ ಕಲಾಪಕ್ಕೆ ಅಡ್ಡಿಪಡಿಸಬೇಡಿ, ಆ ಮೂಲಕ ಸಂಸತ್ ಅಮೂಲ್ಯ ಸಮಯವನ್ನು ಹಾಳು ಮಾಡಬೇಡಿ ಎಂದು ತಿಳಿಸಿದ್ದಾರೆ.
ಅಧಿವೇಶನದಲ್ಲಿ ಎಲ್ಲ ಸಂಸದರೂ ಶಿಸ್ತು ಪಾಲಿಸಬೇಕು. ಸಂಸದರು ಶಿಸ್ತು ಮರೆತರೆ ನನಗೆ ಕೋಪ ಬರುತ್ತದೆ. ಸಂಸದರು ಸದನದ ಭಾವಿಗಿಳಿದು ಪ್ರತಿಭಟನೆ ನಡೆಸುವುದು ಸರಿಯಲ್ಲ. ಅಮೂಲ್ಯವಾದ ಸಂಸತ್ ಸಮಯವನ್ನು ಯಾರೂ ಹಾಳು ಮಾಡಬಾರದು. ನಮ್ಮಲ್ಲಿ ಪರಸ್ಪರ ಗೌರವ ಇರಬೇಕು. ಪ್ರಜೆಗಳ ನಿರ್ಣಯವನ್ನು ನಾವು ಗೌರವಿಸಬೇಕು ಎಂದು ತಿಳಿಸಿದ್ದರು.

Leave a Reply

Your email address will not be published.