ವಿದ್ಯಾರ್ಥಿನಿ ಕೊಲೆಗೆ ತೀವ್ರ ಖಂಡನೆ : ಕೋಲಾರದಲ್ಲಿ ಮುಂದುವರೆದ ಪ್ರತಿಭಟನೆ…!
ಕೋಲಾರ : ಕೋಲಾರದ ಮಾಲೂರು ಪಟ್ಟಣದ ಇಂದಿರಾನಗರದ ವಿದ್ಯಾರ್ಥಿನಿಯನ್ನು ರಕ್ಷಿತಾಳನ್ನು ಹಾಡುಹಗಲೆ ಕೊಲೆ ಮಾಡಲಾಗಿತ್ತು. ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮಾಲೂರಿನಲ್ಲಿ ಎರಡೂ ದಿನಗಳಿಂದ ಉಗ್ರ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಇನ್ನು ವಿಕೋಪಕ್ಕೆ ತಿರುಗುವ ಸಾಧ್ಯತೆ ಕೂಡ ಇದೆ.
ಮಾಲೂರಿನ ಸ್ಥಳೀಯ ತಹಸೀಲ್ದಾರ್ ಕಚೇರಿ ಮುಂದೆ ಸೇರಿದ ಸಮಿತಿಗಳ ಸಂಘಟನೆಗಳ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರು, ವಿದ್ಯಾರ್ಥಿಗಳು ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.ಹೆಣ್ಣುಮಕ್ಕಳಿಗೆ ಭದ್ರತೆ ಖಾತ್ರಿಪಡಿಸುವುದು ಸರ್ಕಾರಗಳ ಮುಖ್ಯ ಆಧ್ಯತೆಯಾಗಬೇಕು. ಈನಿಟ್ಟಿನಲ್ಲಿ ನಿರ್ಭಯ ಅತ್ಯಾಚಾರ ಪ್ರಕರಣದಲ್ಲಿ ಬಂದ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸ್ಸನ್ನು ಜಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಎಐಎಂಎಸ್ಎಸ್ನ ರಾಜ್ಯಾಧ್ಯಕ್ಷೆ ಅಪರ್ಣ ಬಿ.ಆರ್, ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟ ಮುಗಿಸಿ ವಿದ್ಯಾರ್ಥಿನಿ ರಕ್ಷಿತಾ ಸ್ನೇಹಿತೆಯ ಜೊತೆಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಖಂಡನೀಯ ಎಂದು ದೂರಿದರು. ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸಿ: ಚಿಕ್ಕಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಇಂಥ ಕಾಮಕರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಇಂಥ ಅತ್ಯಾಚಾರಿಗಳ ಸೃಷ್ಟಿಗೆ ಕುಮ್ಮಕ್ಕು ನೀಡುತ್ತಿರುವ ಅಂತ ರ್ಜಾಲತಾಣಗಳು, ಸಿನಿಮಾ, ವಿಡಿಯೋಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.