ಕರಾವಳಿಯಲ್ಲಿ ‘ನಳೀನ್ ಹಠಾವೋ’ ಚಳುವಳಿ : BJP ಸಂಸದನ ವಿರುದ್ಧ ವಿರುದ್ಧ ಬಿಜೆಪಿಗರೇ ಗರಂ.!

ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ದ ಕರಾವಳಿ ಭಾಗದಲ್ಲಿ ನಳಿನ್ ಕುಮಾರ್ ಕಟೀಲ್ ಹಠಾವೋ ಚಳುವಳಿ ಆರಂಭವಾಗಿದೆ. ಸಾಮಾಜಿಕ ತಾಣಗಳಲ್ಲಿ ನಳಿನ್ ಕುಮಾರ್ ವಿರುದ್ದ ಫೇಸ್ ಬುಕ್ ಪೇಜ್ ಗಳು ಸೃಷ್ಟಿಯಾಗಿದ್ದು, ಕಟೀಲ್ ಬದಲಿಸಿ ಅಂತ ಪ್ರಧಾನಿ ಮೋದಿಗೆ ಮನವಿ ಮಾಡಲಾಗಿದೆ.

ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಗೆ ನಳಿನ್ ಕುಮಾರ್ ಅಭ್ಯರ್ಥಿಯಾಗೋದು ಬೇಡ ಅಂತ ಬಹಿರಂಗ ವೋಟಿಂಗ್ ಕೂಡ ನಡೆಸಲಾಗಿದೆ. ಈ ನಡುವೆ ಕಳೆದ ಹತ್ತು ವರ್ಷದಿಂದ ಸಂಸದರಾಗಿರೋ ನಳಿನ್ ಕುಮಾರ್ ಜಿಲ್ಲೆಗೆ ಮಾಡಿದ್ದು ಏನು ಅಂತ ಸಾವಿರಾರು ಮಂದಿ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.

ಅದರಲ್ಲೂ ಮಂಗಳೂರಿನ ಪಂಪ್ ವೆಲ್ ಮತ್ತು ತೊಕ್ಕೊಟ್ಟು ಭಾಗದ ಎರಡು ಹೆದ್ದಾರಿ ಫ್ಲೈ ಓವರ್ ಗಳ ಕಾಮಗಾರಿ ಕಳೆದ ಎಂಟು ವರ್ಷಗಳಿಂದ ನಡೀತಾ ಇದ್ರೂ ಇನ್ನೂ ಪೂರ್ಣಗೊಂಡಿಲ್ಲ. ಸದ್ಯ ಈ ವಿಚಾರ ಕರಾವಳಿ ಭಾಗದಲ್ಲಿ ಭಾರೀ ಚರ್ಚೆಯಲ್ಲಿದ್ದು, ನಳಿನ್ ಕುಮಾರ್ ಗೆ ಮುಳುವಾಗಿದೆ. ಈ ನಡುವೆ ಹೇಳಿಕೊಳ್ಳುತಹ ಅಭಿವೃದ್ಧಿ ಮಾಡಿಲ್ಲ ಅಂತ ಸ್ವತಃ ಬಿಜೆಪಿಗರೇ ನಳಿನ್ ವಿರುದ್ಧ ಗರಂ ಆಗಿದ್ದಾರೆ.

ಇನ್ನು ಫ್ಲೈ ಓವರ್ ಪೂರ್ತಿಯಾಗದ ಕಾರಣ ತಲಪಾಡಿಯಲ್ಲಿ ಟೋಲ್ ರದ್ದು ಮಾಡೋದಕ್ಕೆ ನಳಿನ್ ಸೂಚಿಸಿದ್ದರೂ ನವಯುಗ್ ಕಂಪೆನಿತ ಟೋಲ್ ಗುತ್ತಿಗೆದಾರರು ಟೋಲ್ ನಿಲ್ಲಿಸಿಲ್ಲ. ಹೀಗಾಗಿ ಜನ್ರು ಎಲ್ಲಿದ್ದೀರಾ ನಳಿನ್ ಅಂತ ಸಾಮಾಜಿಕ ತಾಣಗಳಲ್ಲಿ ವ್ಯಂಗ್ಯವಾಡ್ತಿದಾರೆ. ಸದ್ಯ ಬಿಜೆಪಿ ಭದ್ರಕೋಟೆಯಾಗಿರೋ ಕರಾವಳಿಯಲ್ಲಿ ಸಂಸದ ನಳಿನ್ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗೋ ವಿಚಾರದಲ್ಲಿ ಭಾರೀ ಅಪಸ್ವರ ಎದ್ದಿದೆ.

Leave a Reply

Your email address will not be published.