Cricket : ಭಾರತದ ಗೆಲುವಿಗೆ 194 ರನ್ ಟಾರ್ಗೆಟ್ : ಆಸರೆಯಾಗಿ ನಿಂತ ಕೊಹ್ಲಿ, ಕಾರ್ತಿಕ್..

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಎಡ್ಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ರೋಚಕ ಹಂತ ತಲುಪಿದೆ. ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಗೆಲುವಿಗೆ 194 ರನ್ ಗುರಿಯನ್ನು ಚೇಸ್ ಮಾಡುತ್ತಿದ್ದು, 110 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

Image result for edgbaston test England India 2018

ಮೂರನೇ ದಿನದಾಟದ ಅಂತ್ಯದ ವೇಳೆಗೆ ದಿನೇಶ್ ಕಾರ್ತಿಕ್ (18*) ಹಾಗೂ ನಾಯಕ ವಿರಾಟ್ ಕೊಹ್ಲಿ (43*) ಕ್ರೀಸ್ ನಲ್ಲಿದ್ದಾರೆ. ಭಾರತದ ಗೆಲುವಿಗೆ ಇನ್ನೂ 84 ರನ್ ಗಳ ಅಗತ್ಯವಿದೆ. ತನ್ನ ಸಾವಿರನೇ ಪಂದ್ಯವನ್ನು ಜಯಿಸಲು ಇಂಗ್ಲೆಂಡ್ ಭಾರತದ 5 ವಿಕೆಟ್ ಪಡೆಯುವ ಅಗತ್ಯವಿದೆ. ಶನಿವಾರ ನಡೆಯಲಿರುವ ನಾಲ್ಕನೇ ದಿನದಾಟದಲ್ಲಿ ಜಯ ಯಾರ ಪಾಲಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

Image result for edgbaston test England India 2018 ishant sharma

ಮೂರನೇ ದಿನದಾಟ ಹಲವು ನಾಟಕೀಯ ತಿರುವುಗಳನ್ನು ಕಂಡಿತು. ವೇಗಿ ಇಶಾಂತ್ ಶರ್ಮಾ ದಾಳಿಗೆ ಸಿಲುಕಿದ ಆತಿಥೇಯ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 180 ರನ್ ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ 5, ಸ್ಪಿನ್ನರ್ ಆರ್. ಅಶ್ವಿನ್ 3 ಹಾಗೂ ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು.

 

 

Leave a Reply

Your email address will not be published.

Social Media Auto Publish Powered By : XYZScripts.com