ಆಡಳಿತ ವೈಫಲ್ಯದ ಬಗ್ಗೆ HDK ಆತ್ಮಾವಲೋಕನ ಮಾಡಿಕೊಳ್ಳಲಿ : ಕೋಟಾ ಶ್ರೀನಿವಾಸ ಪೂಜಾರಿ

ಶಿವಮೊಗ್ಗ : ಶಿವಮೊಗ್ಗದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ ನೀಡಿದ್ದಾರೆ. ‘ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆರಂಭದಲ್ಲಿ ಕುಸಿತ ಕಂಡಿದೆ. ಬಜೆಟ್ ನಲ್ಲಿ ರೈತರಿಗಾಗಿ ಇಟ್ಟಿರುವ ಹಣ ಯಾವುದಕ್ಕೂ ಸಾಲುವುದಿಲ್ಲ ‘ ಎಂದಿದ್ದಾರೆ.

‘ ಕೇಂದ್ರ ಸರ್ಕಾರದ ಯೋಜನೆಗಳನ್ನ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠನಾಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇಲ್ಲಿಯವರೆಗೆ ಶೇಕಡಾ 3 % ರಷ್ಟು ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಪ್ರಗತಿ ಕಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಹಣವನ್ನಾದರು ರಾಜ್ಯ ಸರ್ಕಾರ ಖರ್ಚು ಮಾಡಬೇಕು ‘ ಎಂದಿದ್ದಾರೆ.

‘ ಮುಖ್ಯಮಂತ್ರಿಗಳು ಆಡಳಿತ ವೈಪಲ್ಯದ ಬಗ್ಗ ಆತ್ಮಾವಲೊಕನ ಮಾಡಿಕೊಳ್ಳಬೇಕು. ಕೇಂದ್ರಸರ್ಕಾರ ಬಡವರಿಗಾಗಿ ಘೋಷಣೆ ಮಾಡಿರುವಂತಹ ಯೋಜನೆಗಳನ್ನ ಜಿಲ್ಲಾ ಉಸ್ತುವಾರಿ ಸಚಿವರು. ಸಚಿವರುಗಳು ಅನುಷ್ಠಾನಕ್ಕೆ ತರಬೇಕು ‘ ಎಂದು ಆಗ್ರಹಿಸಿದ್ದಾರೆ.

‘ ಸಿಎಂ ಕುಮಾರಸ್ವಾಮಿ ಯವರು ಯಾರನ್ನ ನಂಬಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ಶುದ್ದ ಕುಡಿಯುವ ನೀರಿನ ಘಟಕ 50% ನಷ್ಟು ಆರಂಭಗೊಂಡಿಲ್ಲ. ಒಂದೇ ಮಾದರಿಯ ಶುದ್ದಕುಡಿಯುವ ನೀರಿನ ಘಟಕಗಳು ಒಂದು ಕಡೆ 3.5 ಲಕ್ಷ ಖರ್ಚು ಮಾಡಿದ್ದರೆ, ಇನ್ನೊಂದು ಕಡೆ 9 ಲಕ್ಷ ಹಣವನ್ನ ಖರ್ಚು ಮಾಡಿದ್ದಾರೆ. ಈ ವಿಚಾರವಾಗಿ ಸದನದಲ್ಲಿ ಚರ್ಚೆಯಾಗಿದೆ..ಜಂಟಿ ಸದನ ಸಮಿತಿ ರಚಿಸಿ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com