ಸಿಎಂ ವಿರುದ್ಧ ಪತ್ರ ಸಮರ : ಕೊಪ್ಪಳ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಹಾಲಪ್ಪ ಆಚಾರ್ ಒತ್ತಾಯ

ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಪತ್ರ ಬರೆದು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯನ ಹಾದಿಯಂತೆ ಬಿಜೆಪಿ ಶಾಸಕರು ಇದೀಗ ಹೆಚ್ ಡಿಕೆ ವಿರುದ್ದ ಇದೀಗ ಪತ್ರದ ಸಮರ ಸಾರಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಸಿಎಂ ಹೆಚ್.ಡಿ.ಕೆ ಲಘುವಾಗಿ ಮಾತನಾಡಿದ ಬೆನ್ನಲ್ಲೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಸಿಎಂಗೆ ಪತ್ರ ಬರೆದು ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕ ಎಂದು ಘೋಷಣೆ ಮಾಡುವಂತೆ ಪತ್ರ ಬರೆದಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ಎರಡು ತಿಂಗಳಿನಿಂದ ಮಳೆ ಸರಿಯಾಗಿ ಆಗುತ್ತಿಲ್ಲ. ಜಿಲ್ಲೆಯ ಎಲ್ಲಾ ಪ್ರದೇಶದಲ್ಲಿ ಬೆಳೆಗಳು ನಾಶವಾಗಿವೆ. ಇದರಿಂದಾಗಿ ರೈತರು ಕಂಗಲಾಗಿದ್ದು, ಬೆಳೆ ನಾಶ ಮಾಡ್ತಾ ಇದ್ದಾರೆ. ತಕ್ಷಣ ನನ್ನ ಕ್ಷೇತ್ರದ ಎರಡು ತಾಲೂಕುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸಿಎಂಗೆ ಬರೆದ ಪತ್ರ ಲಭ್ಯವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಹಾಲಪ್ಪ ಆಚಾರ್ ಒಂದು ವೇಳೆ ಸಿಎಂ ನಿರ್ಲಕ್ಷ್ಯವಹಿಸಿದರೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದರು.

Leave a Reply

Your email address will not be published.