Bahubali part 3 : ಬರ್ತಿದೆ ‘ ‘ಬಾಹುಬಲಿ’ ಪಾರ್ಟ್-3’ ಅಭಿಮಾನಿಗಳಿಗೆ ಗುಡ್ ನ್ಯೂಸ್…

‘ಬಾಹುಬಲಿ’ ಅಭಿಮಾನಿಗಳಿಗೆ ಗುಡ್ ನ್ಯೂಸ್! ಬರ್ತಿದೆ ‘ಪಾರ್ಟ್-3’

ನೆಟ್ಫ್ಲಿಕ್ಸ್ ನಲ್ಲಿ Netflix ಹೊಸ ಬಾಹುಬಲಿ ಸರಣಿ ಶುರುವಾಗ್ತಿದೆ. ಈ ಸರಣಿಯಲ್ಲಿ ಬಾಹುಬಲಿಯ ಮಹಾನ್ ಸಾಮ್ರಾಜ್ಯವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಸಿಗ್ತಿದೆ. ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಹಾಗೂ ಬಾಹುಬಲಿ 2 ಚಿತ್ರದ ಪ್ರಿಕ್ವೆಲ್ ನಲ್ಲಿ ಶಿವಗಾಮಿನಿ ಜೀವನವನ್ನು ತೋರಿಸಲಾಗುವುದು.
ನೆಟ್ಫ್ಲಿಕ್ಸ್ ಗೆ Netflix  ಈಗಾಗಲೇ ಎರಡು ಆವೃತ್ತಿಯ ಆರ್ಡರ್ ಸಿಕ್ಕಿದೆ. ಬಾಹುಬಲಿ: ದಿ ಬಿಗ್ ನಿಂಗ್ ಹಾಗೂ ಬಾಹುಬಲಿ : ದಿ ಕನ್ಕ್ಲೂಷನ್ಸ್ ನಂತ್ರ ಬರ್ತಿರುವ ಪ್ರಿಕ್ವೆಲ್ ಗೆ ಬಾಹುಬಲಿ ಬಿಫೋರ್ ದ ಬಿಗ್ ನಿಂಗ್ ಎಂದು ಹೆಸರಿಡಲಾಗಿದೆ. ಈ ಪ್ರಿಕ್ವೆಲ್ ಆನಂದ್ ನೀಲಕಂಠನ್ ಅವ್ರ ಪುಸ್ತಕ ದಿ ರೈಸ್ ಆಫ್ ಶಿವಗಾಮಿನಿಯನ್ನು ಆಧರಿಸಿ ತಯಾರಾಗ್ತಿದೆ.

ಸರಣಿಯ ಒಂದು ಆವೃತ್ತಿಯಲ್ಲಿ 9 ಎಪಿಸೋಡ್ ಇರಲಿದೆ. ಬಂಡಾಯ ಹಾಗೂ ಪ್ರತಿಕಾರದ ಹುಡುಗಿ ಬುದ್ಧಿವಂತ ರಾಣಿಯಾಗುವುದು ಹೇಗೆ ಎಂಬುದನ್ನು ಹೇಳಲಾಗುವುದು. ನೆಟ್ಫ್ಲಿಕ್ಸ್ ಅರ್ಕಾ ಮೀಡಿಯಾ ವರ್ಕ್ಸ್ ಹಾಗೂ ರಾಜಮೌಳಿ ತಂಡವೊಂದನ್ನು ರಚಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com