ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿ ತಂದೆ ನಿಧನ : ಇಂದು ಸಂಜೆ ಅಂತ್ಯಕ್ರಿಯೆ

ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿ ಪಿತೃ ವಿಯೋಗ ಉಂಟಾಗಿದೆ. ಮಾಜಿ ಸಚಿವ ವಿನಯ ತಂದೆ ರಾಜಶೇಖರ ಕುಲಕರ್ಣಿ (84) ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ಮಧ್ಯರಾತ್ರಿ 12 ಗಂಟೆಗೆ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ರಾಜಶೇಖರ ಕುಲಕರ್ಣಿ ಕೊನೆಯುಸಿರೆಳೆದಿದ್ದಾರೆ.

ಇಂದು ಸಂಜೆ ನಾಯಕನೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನವಲಗುಂದ ತಾಲೂಕಿನ ನಾಯಕನೂರು ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಲಿದ್ದು, ರಾಜಶೇಖರ ಕುಲಕರ್ಣಿ ಅಗಲಿಕೆಗೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com