ಹಿಂದೂಗಳನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ : ಎಮ್.ಎಲ್.ಸಿ ಬೋಜೇಗೌಡ

‘ ಹಿಂದೂಗಳನ್ನ ಕಡೆಗಣಿಸಿದ್ದೇ ಕರಾವಳಿ ಭಾಗದ ಪ್ರದೇಶಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಕಾರಣ ‘ ಎಂದು ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಎಲ್ ಸಿ ಬೋಜೇಗೌಡ ಈ ಮಾತನ್ನು ಹೇಳಿದ್ದಾರೆ.

‘ ಈ ಮೊದಲು ಹಿಂದೂಗಳು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಆ ಮತಗಳೆಲ್ಲ ಎಲ್ಲಿಗೆ ಹೋದವು. ಹಿಂದೂಗಳನ್ನ ಅತಿಯಾಗಿ ಕಡೆಗಣಿಸಿದ್ದರಿಂದಲೇ ಕರಾವಳಿಯಲ್ಲಿ ಕಾಂಗ್ರೆಸ್ ಸೋಲಲು ಕಾರಣ ‘ ಎಂದು ಹೇಳಿದ್ದಾರೆ.

‘ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಬೇಕಿದೆ. ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೇ, ಜೆಡಿಎಸ್ ಕೂಡ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ  ‘ ಎಂದು ಬೋಜೇಗೌಡ ಅವರು ಸಲಹೆ ನೀಡಿದರು.

Leave a Reply

Your email address will not be published.

Social Media Auto Publish Powered By : XYZScripts.com