ಬಾಗಲಕೋಟೆ : ನಿಧಿಯಾಸೆಗಾಗಿ 4 ವರ್ಷದ ಬಾಲಕನ ಮರ್ಮಾಂಗ ಹಾಗೂ ಕತ್ತು ಕೊಯ್ದು ಕೊಲೆ..!

ಬಾಲಕನ ಮಾರ್ಮಾಂಗ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಗ್ರಾಮದ ಬಳಿ ನಡೆದಿದೆ. ಬ್ಲೇಡ್ ನಿಂದ ನಾಲ್ಕು ವರ್ಷದ ಬಾಲಕನ ಮಾರ್ಮಾಂಗ ಹಾಗೂ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

4 ವರ್ಷದ ಮುತ್ತಪ್ಪ ಅಮಜಗೋಳ ಕೊಲೆಯಾದ ಬಾಲಕ ಎಂದು ತಿಳಿದು ಬಂದಿದೆ. ಕಿವಿಯಲ್ಲಿನ ಕಿವಿ ಓಲೆ, ಉಡದಾರ, ಕೊರಳಲ್ಲಿನ ತಾಯತ, ಕಿತ್ತುಕೊಂಡು ಕೊಲೆ ಮಾಡಲಾಗಿದೆ ಎಂಬ ಆರೋಪ ಪೋಷಕರದ್ದಾಗಿದೆ.

ನಿಧಿಗಾಗಿ ಬಾಲಕನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com