WATCH : ಶತಕವನ್ನು ಪತ್ನಿಗೆ ಅರ್ಪಿಸಿದ ಕೊಹ್ಲಿ : ಉಂಗುರಕ್ಕೆ ಮುತ್ತಿಟ್ಟು ಸಂಭ್ರಮಿಸಿದ ಕ್ಯಾಪ್ಟನ್..!

ಎಡ್ಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿದರು.  225 ಎಸೆತಗಳನ್ನು ಎದುರಿಸಿದ ವಿರಾಟ್, 22 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 149 ರನ್ ಗಳಿಸಿದರು. ಇಂಗ್ಲೆಂಡ್ ನೆಲದಲ್ಲಿ ವಿರಾಟ್ ಕೊಹ್ಲಿ ದಾಖಲಿಸಿದ ಮೊದಲ ಶತಕ ಇದಾಗಿದೆ.

ಸೆಂಚುರಿ ಸಿಡಿಸಿದ ನಂತರ ಕೊಹ್ಲಿ ತಮ್ಮ ಕೊರಳಲ್ಲಿನ ಉಂಗುರಕ್ಕೆ ಮುತ್ತಿಡುವ ಮೂಲಕ ಪಂದ್ಯ ನೋಡಲು ಗ್ಯಾಲರಿಯಲ್ಲಿ ಕುಳಿತಿದ್ದ ಪತ್ನಿ ಅನುಷ್ಕಾ ಶರ್ಮಾಗೆ ಶತಕವನ್ನು ಅರ್ಪಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..

Leave a Reply

Your email address will not be published.

Social Media Auto Publish Powered By : XYZScripts.com