ಕುಮಾರಸ್ವಾಮಿ ಅಳಲು ಕೇವಲ ಕಾಂಗ್ರೆಸ್ ಅಲ್ಲ, ರೇವಣ್ಣ ಕಾಟವೂ ಕಾರಣ : ಮಾಜಿ ಸಚಿವ

ಗದಗ : ‘ ಮುಖ್ಯಮಂತ್ರಿ ಕುಮಾರಸ್ವಾಮಿ ಒಳಗೂ, ಹೊರಗಿನ ಕಾಟಕ್ಕೆ ಅತ್ತಿದ್ದಾರೆ. ಕೇವಲ ಕಾಂಗ್ರೆಸ್ ನವರ ಕಾಟವಲ್ಲ. ಆಂತರಿಕ ಹಾಗೂ ಸಚಿವ ರೇವಣ್ಣ ಅವರ ಕಾಟವೂ ಕಾರಣ ‘ ಎಂದು ಮಾಜಿ ಸಚಿವ ಎಸ್.ಎಸ್ ಪಾಟೀಲ್ ಹೇಳಿದ್ದಾರೆ.

‘ ಸಮ್ಮಿಶ್ರ ಸರ್ಕಾರಕ್ಕೆ ಆಡಳಿತ ನಡೆಸಲು ಸಹಕರಿಸಿ. ಸಿಎಮ್ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ ಅವರಿಗೆ ಸಹಕರಿಸಿ. ಮಾಜಿ ಸಿಎಮ್ ಬಿಎಸ್ವೈ ಗೂ ಕೂಡ ಪಕ್ಷದಲ್ಲಿಯೇ ಕಾಟವಿತ್ತು. ಮಾಜಿ ಸಿಎಮ್ ಸಿದ್ರಾಮಯ್ಯ ಅವರಿಗೂ ಇಂಥ ತೊಂದರೆ ಇದ್ರು ಅವ್ರು ದಿಟ್ಟತನದಿಂದ ನಡೆಸಿದರು ‘ ಗದಗನಲ್ಲಿ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಹೇಳಿಕೆ ನೀಡಿದ್ದಾರೆ.

‘ ಕಾಂಗ್ರೆಸ್ ನವರಿಗೆ ಪಕ್ಷ ಕಟ್ಟಿಯೇ ಗೊತ್ತಿಲ್ಲ.ನೆಹರು, ಇಂಧೀರಾ ಗಾಂಧಿ ಹೆಸರ ಮೇಲೆ ಬಂದವರು. ಇನ್ನಾದ್ರು ಪಕ್ಷಕಟ್ಟಲು ಮುಂದಾಗಿ. ಕೇವಲ ಮಂತ್ರಿಯಾಗಲು ಕಚ್ಚಾಡಬೇಡಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಏನೂ ಉಳಿದಿಲ್ಲ. ಈಗಿನ ನಿಮ್ಮ ನಡೆ ಮುಂದುವರೆದರೆ ರಾಜ್ಯದಲ್ಲಿ ಕಾಂಗ್ರೆಸ್ ಹೋಗುತ್ತೆ ‘ ಎಂದಿದ್ದಾರೆ.

‘ ಪುಕ್ಕಟೆ ಯೋಜನೆ ಬೇಕಾಗಿಲ್ಲ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ. ಇಂಧಿರಾ ಕ್ಯಾಂಟಿನ್, ಸಾಲಮನ್ನಾ, ಎನ್.ಆರ್.ಎ.ಜಿ. ಯೋಜನೆಗಳು ಓಟಿಗಾಗಿ ಮಾಡಿದ ಯೋಜನೆ ‘ ಎಂದು ಮಾಜಿ ಸಹಕಾರಿ ಹಾಗೂ ಅರಣ್ಯ ಇಲಾಖೆ ಸಚಿವ ಎಸ್.ಎಸ್.ಪಾಟೀಲ್ ಅಸಮಾಧಾನ. ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com