ವಿಜಯಪುರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ವೈದ್ಯ ಡಾ. ಆರ್.ಆರ್ ಪದಕಿ ನಿಧನ..

ವಿಜಯಪುರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ವೈದ್ಯ ಡಾ. ಆರ್ ಆರ್ ಪದಕಿ ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಡಾ ಆರ್ ಆರ್ ಪದಕಿಯವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಿರಿಯ ವೈದ್ಯ ಡಾ. ಆರ್ ಆರ್ ಪದಕಿ ಬಡವರ ವೈದ್ಯರೆಂದೇ ಜನ ಜನಿತರಾಗಿದ್ದರು. ನಾಳೆ ಮುದ್ದೇಬಿಹಾಳ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com