ಮರಳು ನೀತಿ ಜಾರಿ ಮಾಡುವ ತಾಕತ್ತು ಸರ್ಕಾರಕ್ಕಿಲ್ಲ : ಕೋಟಾ ಶ್ರೀನಿವಾಸ್ ಪೂಜಾರಿ

‘ ರಾಜ್ಯದಲ್ಲಿ ಮರಳು‌ ಮಾಫಿಯಾ ಅಟ್ಟಹಾಸ ಮಿತಿಮೀರಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ 16,000 ಕೋಟಿ ಮರಳು ಅಕ್ರಮ ನಡೆದಿದೆ. ಇದೆಲ್ಲ ಸರ್ಕಾರದ ಕೃಪಾಪೋಷಿತದಲ್ಲೆ ಈ ಅಕ್ರಮ ನಡೆದಿದೆ‌ ‘ ಎಂದು ಗದಗ ನಗರದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಅವರು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ ಮರಳು ನೀತಿ ಜಾರಿ ಮಾಡುವ ತಾಕತ್ತು ಸರ್ಕಾರಕ್ಕಿಲ್ಲ. ಸಿಎಂ ಎಚ್ಡಿಕೆ ಅವ್ರಿಗೆ ಜನತೆ ಬಗ್ಗೆ ಕಾಳಜಿ ಇದ್ರೆ ಮರಳು ನೀತಿ ಜಾರಿ ಮಾಡಬೇಕು‌. ಜನ ಸಾಮಾನ್ಯರಿಗೆ ಮನೆ ಕಟ್ಟಲು ಮರಳು ಸಿಗ್ತಾಯಿಲ್ಲ. ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ‘ ಎಂದರು.

‘ 18000 ಘಟಕಗಳ ಅಳವಡಿಕೆಗೆ ಮಹಾರಾಷ್ಟ್ರ ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಇದರ ಟೆಂಡರ್ ನಲ್ಲಿ ಪಾರದರ್ಶಕತೆ ಪಾಲಿಸಿಲ್ಲ. ರಾಜ್ಯದಲ್ಲಿ ಈಗಾಗಲೇ ಶೇಕಡಾ 50 ರಷ್ಟು ಶುದ್ಧ ನೀರಿನ ಘಟಕಗಳು ಬಂದ್ ಗಿವೆ ‘ ಎಂದು ಕಿಡಿಕಾರಿದರು.

Leave a Reply

Your email address will not be published.