ಕೊಡಗು ಜಿಲ್ಲೆ ಉಸ್ತುವಾರಿ ಸಚಿವರಾಗಿ ಸಾರಾ ಮಹೇಶ್ ಆಯ್ಕೆ : ಜನತೆಯಿಂದ ಅದ್ದೂರಿ ಸ್ವಾಗತ

ಕೊಡಗು : ಕೊಡಗು ನೂತನ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿದ್ದ ಸಚಿವ ಸಾ ರಾ ಮಹೇಶ್ ಅವರಿಗೆ ಮಡಿಕೇರಿಯಲ್ಲಿ ಅದ್ದೂರಿ ಸ್ವಾಗತ ಕೊರಿದ್ದರು. ಕೊಡಗು ಜಿಲ್ಲಾಡಳಿತ ಹಾಗೂ ಜಿಲ್ಲಾ ಜೆಡಿಎಸ್ ನಿಂದ ನೂತನ ಸಚಿವರಿಗೆ ಮಡಿಕೇರಿ ಜನತೆ ಅದ್ದೂರಿಯಾಗಿ ಸ್ವಾಗತಿಸಿದ್ದರು.

ಮಡಿಕೇರಿ ಜನತೆ ಉಸ್ತುವಾರಿ ಸಚಿವ ಸಾ ರಾ ಮಹೇಶ್  ಅದ್ದೂರಿ ಸನ್ಮಾನ ಮಾಡಿದ್ದರು, ನಂತರ ಸಾ ರಾ ಮಹೇಶ್ ಅವರು  ವೀರ ಸೇನಾನಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಿಲ್ಲಾಡಳಿತ ಭವನದಲ್ಲಿ ಉಸ್ತುವಾರಿ ಸಚಿವರ ಕೊಠಡಿ ಉದ್ಘಾಟನೆ ಮಾಡಿದ್ದರು.

 

ಇನ್ನ ಉಸ್ತುವಾರಿ ಸಚಿವರ  ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾ ರಾ ಮಹೇಶ್,  ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ, ನೋಂದಣಿಯಾಗದ ಹೋಮ್ಸ್ ಸ್ಟೇ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಹಾಗೂ ನಗರದ ಪರವಾನಗಿ ನಕ್ಷೆ ಹೊಂದಾಣಿಕೆಯಾಗದ ಬಗ್ಗೆ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಮಡಿಕೇರಿಯಲ್ಲಿ ಪ್ರವಾಸೋಧ್ಯಮ ಹಾಗೂ ಕೊಡಗು ಉಸ್ತುವಾರಿ ಸಾ ರಾ ಮಹೇಶ್ ಹೇಳಿಕೆ  ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com