PM ಮೋದಿ ಭಾರತಕ್ಕೆ ದೇವರು ಕೊಟ್ಟ ಉಡುಗೊರೆ : ಶಿವರಾಜ್ ಸಿಂಗ್ ಚೌಹಾನ್

ಪ್ರಧಾನಿ ನರೇಂದ್ರ ಮೋದಿಯವರು ಭಾರತಕ್ಕೆ ದೇವರು ಕೊಟ್ಟ ಉಡುಗೊರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಶುಕ್ರವಾರ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

‘ ದೇಶದ ಅಭಿವೃದ್ಧಿಯ ಬಗ್ಗೆ, ಸಾರ್ವಜನಿಕರ ಒಳಿತು ಹಾಗೂ ಉನ್ನತಿಗಾಗಿ ಇಷ್ಟೊಂದು ಕಾಳಜಿ ಹೊಂದಿರುವ ಇನ್ನೊಬ್ಬ ವ್ಯಕ್ತಿಯನ್ನು ನಾನು ಯಾವತ್ತೂ ನೋಡಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮ್ಮ ದೇಶಕ್ಕೆ ಸೂಕ್ತ ಹಾಗೂ ನಮಗೆಲ್ಲ ಮಾದರಿಯ ವ್ಯಕ್ತಿಯಾಗಿದ್ದಾರೆ ‘ ಎಂದು ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರಾಗುತ್ತಿದ್ದು, ಮುಂದಿನ ಬಾರಿಯೂ ಬಹುಮತ ಪಡೆದು ಗೆಲ್ಲುವ ಭರವಸೆಯಿದೆ ಎಂದು ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.

Leave a Reply

Your email address will not be published.