ತುಮಕೂರು : ಜಿ. ಪರಮೇಶ್ಚರ್ ನಮ್ಮ ಬಾಸ್ ಎಂದ ಬಿಜೆಪಿ ಶಾಸಕ….!

ತುಮಕೂರು : ಬಿಜೆಪಿ ಮತ್ತು ಕಾಂಗ್ರೆಸ್ ಮೊದಲಿನಿಂದಲೂ ಹಾವು ಮುಂಗುಸಿಯಂತೆ. ಪಕ್ಷದ ನಾಯಕರು ಕೂಡ ಕಾಂಗ್ರೆಸ್ ಮೇಲೆ ಬಿಜೆಪಿ, ಬಿಜೆಪಿ ಮೇಲೆ ಕಾಂಗ್ರೆಸ್ ಕತ್ತಿ ಮಸೆಯುತ್ತಿರುತ್ತದೆ.ಒಬ್ಬರ ಮೇಲೆ ಇನ್ನೋಬ್ಬರು ಸ್ಪೋಟಕ ಮಾಹಿತಿ ಹೊರಹಾಕುತ್ತಿರುತ್ತಾರೆ. ಇದರ ಮಧ್ಯೆ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ಜಿ ಪರಮೇಶ್ವರ ನಮ್ಮ ಬಾಸ್ ಎಲ್ಲರೂ ಆಶ್ಚರ್ಯ ಪಡುವಂತೆ ಹೇಳಿಕೆ ನೀಡಿದ್ದಾರೆ.

 

ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಬಿಜೆಪಿ ಶಾಸಕ ಜ್ಯೋತಿ ಗಣೇಶ್,  ಜಿಲ್ಲಾ ಅಭಿವೃದ್ದಿಗೆ ಜಿ.ಪರಮೇಶ್ವರ್ ಅವರು ಹೆಚ್ಚಿನ ಗಮನ ಕೊಡಬೇಕು. ನಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರೇ ನಮ್ಮ ಬಾಸ್ ಎಂದು ಹೇಳಿದ್ದಾರೆ.  ತುಮಕೂರು ನಗರಕ್ಕೆ ಹೆಚ್ಚಿನ ಪ್ಯಾಕೇಜ್ ತರುವಂತೆ ಅವರಲ್ಲಿ ಮನವಿ ಮಾಡುತ್ತೇವೆ. ಜಿಲ್ಲೆಗೆ ಹೆಚ್ಚಿನ ಅನುದಾನ ತರಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com