ಯಲಹಂಕ : ಬಿಎಂಟಿಸಿ ಬಸ್ – ಶಾಲಾ ವಾಹನದ ನಡುವೆ ಡಿಕ್ಕಿ : ಅದೃಷ್ವಶಾತ್ ಪಾರಾದ ಮಕ್ಕಳು

ಯಲಹಂಕ : ಬಿಎಂಟಿಸಿ ಬಸ್ ಹಾಗೂ ಶಾಲಾ ವಾಹನದ ನಡುವೆ ಡಿಕ್ಕಿಯಾಗಿರುವ ಘಟನೆ ಯಲಹಂಕದ ಎನ್ ಇ ಎಸ್ ಬಳಿಯ ತಿರುವಿನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ. ಪ್ರೆಸಿಡೆನ್ಸಿ ಶಾಲೆಗೆ ಸೇರಿದ ಶಾಲಾ ಮಕ್ಕಳ ವಾಹನದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ..

ಯಲಹಂಕ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಶಾಲಾ ಮಕ್ಕಳ ಬಸ್ ಚಾಲಕ ಮಂಜುನಾಥ್ ಕುಡಿದು ವಾಹನ ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತದ ನಂತರ ಪೋಲೀಸರು ಪರಿಶೀಲಿಸಿದಾಗ ಚಾಲಕ ಕುಡಿದಿರುವುದು ಬಯಲಿಗೆ ಬಂದಿದೆ. ಅಪಘಾತದ ವೇಳೆ ಶಾಲಾ ಮಕ್ಕಳು ಬಸ್ ನಲ್ಲಿರಲಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com