ಸ್ವಚ್ಛಮೇವ ಜಯತೇ : ಬೀದರ್ ನ ಪುಟ್ಟ ಬಾಲಕಿ ಕರ್ನಾಟಕ ಸರ್ಕಾರದ ಯೋಜನಾ ರಾಯಭಾರಿ…!

ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ಹೊಂದಿರುವ ಬೀದರ್ ಜಿಲ್ಲೆಯ ಒಂದನೇ ತರಗತಿ ವಿಧ್ಯಾರ್ಥಿನಿ ಕರ್ನಾಟಕ ಸರ್ಕಾರದ ಸ್ವಚ್ಛ ಸರ್ವೇ ಕ್ಷಣ ಅಭಿಯಾನ ಯೋಜನೆಯ ರಾಯಭಾರಿಯಾಗಿದ್ದಾಳೆ. ಹೌದು. ಬೀದರ್ ನಗರದ ಚಿಕಪೇಟ ಬಡಾವಣೆಯ ಯುಕ್ತಿ ಅರಳಿ ಎಂಬ 6 ವಯಸ್ಸಿನ ಪುಟ್ಟ ಬಾಲಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆ ನಡೆಸುತ್ತಿರುವ 2008 ರ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ರಾಯಭಾರಿಯಾಗಿದ್ದಾಳೆ.

ಅಗಸ್ಟ 1 ರಿಂದ 31 ರವೆಗೆ ನಡೆಯಲಿರುವ ಅಭಿಯಾನದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವ ಕೃಷ್ಣಭೈರೇಗೌಡ ಅವರು ಈ ಬಾಲಕಿ ಮುಖ ಪುಟವುಳ್ಳ ಜಾಗೃತಿ ಭಿತ್ತಿಪತ್ರ, ಪ್ರಚಾರಕ್ಕೆ ಚಾಲನೆ ನೀಡಿದರು. ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ, ಕಸಮುಕ್ತ ಗ್ರಾಮ, ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡುವುದು ಸೇರಿದಂತೆ ಹಲವು ವಿಶೇಷತೆಗಳು ಈ ಅಭಿಯಾನದಲ್ಲಿದ್ದು ಬೀದರ್ ನ ಹುಡುಗಿ ಸರ್ಕಾರದ ಯೋಜನೆಯ ಪೋಸ್ಟರ್ ಮೇಲೆ ಬಂದಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿವೆ.

ಯುಕ್ತಿ ಅರಳಿ ಕಳೆದ ಎರಡು ವರ್ಷಗಳಿಂದ ಬೀದರ್ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ವಿರುದ್ಧ ಜಾಗೃತಿ ಮೂಡಿಸಿದ್ದಾಳೆ. ಈಕೆಯ ತಂದೆ ಡಾ.ಗೌತಮ ಅರಳಿ ಬೀದರ್ ಜಿಲ್ಲಾ ಪಂಚಾಯತನ ಸ್ವಚ್ಛ ಭಾರತ ಅಭಿಯಾನ ಯೋಜನಾಧಿಕಾರಿಯಾಗಿದ್ದು ತಂದೆಯೊಂದಿಗೆ ಮೊದ ಮೊದಲು ಸುಮ್ಮನೆ ರೌಂಡ್ ಹಾಕ್ತಿದ್ದ ಯುಕ್ತಿ ದಿನ ಕಳೆದಂತೆ ಭಾಷಣ ಮಾಡೊದು ಜನರಿಗೆ ಸ್ವಚ್ಛ ಭಾರತದ ಸಂದೇಶ ಸಾರುವುದು ಆರಂಭಿಸಿದಳು.

ಪುಟ್ಟ ಪೋರಿಯ ತೊದಲು ನುಡಿಯಿಂದ ಪ್ರಭಾವಿತರಾದ ಎಷ್ಟೊ ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತ ವಾದವು. ಇದನ್ನೇ ಗಮನಿಸಿ ಸರ್ಕಾರ ರಾಯಭಾರಿಯಾಗಿ ನೇಮಕ ಮಾಡಿದೆ ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com