ಉತ್ತರ ಕರ್ನಾಟಕದಲ್ಲಿ ಬಂದ್ ಕರೆ ಹಿಂಪಡೆದ ಸಮಿತಿ : ಸಾಂಕೇತಿಕ ಪ್ರತಿಭಟನೆಗೆ ಚಾಲನೆ

ಹುಬ್ಬಳ್ಳಿ : ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕದಲ್ಲಿ ಇಂದು ಬಂದ್ ಗೆ ಕೆರೆ ನೀಡಿದ್ದರು, ಆದರೆ ಹಲವಾರು ಸಂಘಟನೆಗಳು ಬಂದ್ ಗೆ ಬೆಂಬಲ ನೀಡದ ಕಾರಣ. ಬಂದ್ ಕರೆ ಹಿಂಪಡೆದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ  ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ.

 

ಬಜೆಟ್ ಮಂಡನೆಯಲ್ಲಿ ಉತ್ತರ ಕರ್ನಾಟಕವನ್ನು ಸರ್ಕಾರ ಕಡೆಕಣಿಸಿದಕ್ಕೆ ವಿರೋಧಿಸಿ,  ಉತ್ತರ ಕರ್ನಾಟಕ  ಪ್ರತ್ಯೇಕ ರಾಜ್ಯವಾಗಬೇಕು ಎಂದು ಬಂದ್ ಗೆ ಮುಂದಾಗಿದ್ದರು, ಇದೀಗ ನಮ್ಮ ಬೇಡಿಕೆಯನ್ನು ಈಡೇರಿಸಲು ಸಿಎಂ ಕುಮಾರಸ್ವಾಮಿ 15 ದಿನಗಳ ಕಾಲಾವಕಾಶವನ್ನು  ಕೇಳಿ ಭರವಸೆ ನೀಡಿದ್ದಾರೆ.  ಈಗಾಗಿ ಬಂದ್ ಕೈ ಬಿಡಲು ನಿರ್ಧರಿಸಿದ್ದೇವೆ ಹೊರತು ಪ್ರತ್ಯೇಕ ರಾಜ್ಯದ ಹೋರಾಟ ಕೈ ಬಿಟ್ಟಿಲ್ಲ ಎಂದು  ತಿಳಿಸಿದ್ದಾರೆ.

 

ಇನ್ನ ವಿಜಯಪುರ, ಕೊಪ್ಪಳ, ರಾಯಚೂರು, ಬಾಗಲಕೋಟೆಯಲ್ಲಿ ಬಂದ್ ಗೆ ಬೆಂಬಲ ವ್ಯಕ್ತವಾಗಿಲ್ಲ.  ಬಸ್ ಸಂಚಾರ, ಶಾಲಾ- ಕಾಲೇಜು ಎಂದಿನಂತೆ ಆರಂಭಗೊಂಡಿವೆ. ಜನಜೀವನ ಎಂದಿನಂತಿದೆ. ಆದರೂ ಪೊಲೀಸ್ ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಕರವೇ ಸೇರಿದಂತೆ ಕೆಲವು ಸಂಘಟನೆಗಳು ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಿವೆ. ಹಾವೇರಿಯಲ್ಲಿ,  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ, ಪರ ವಿರುದ್ಧದ ಸಂಘಟನೆಗಳ ಸಾಂಕೇತಿಕ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಯಾದಗಿರಿಯಲ್ಲಿ ಕನ್ನಡಪರ ಸಂಘಟನೆಗಳಿಂದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಎಂದಿನಂತೆ ಶಾಲಾ ಕಾಲೇಜು, ಸಾರಿಗೆ ಸಂಚಾರವಿದೆ.

Leave a Reply

Your email address will not be published.

Social Media Auto Publish Powered By : XYZScripts.com