ಶಾದಿ ಭಾಗ್ಯದಲ್ಲಿ ಗೋಲ್ ಮಾಲ್..? : ನಕಲಿ ದಾಖಲೆ ಸೃಷ್ಟಿಸಿ ಹಣ ಕೊಳ್ಳೆ ಹೊಡೆಯುವ ಪ್ಲ್ಯಾನ್..!

ಸರ್ಕಾರ ಅಲ್ಪಸಂಖ್ಯಾತರ ಕುಟುಂಬಗಳಿಗೆ ಅನುಕೂಲ ಆಗ್ಲಿ ಅಂತ ಶಾಧಿಭಾಗ್ಯ ಯೋಜನೆಯನ್ನೇನೋ ಜಾರಿಗೆ ತಂದಿದೆ ಆದ್ರೆ ಇದ್ರಲ್ಲೂ ನಕಲಿ ಶಾದಿ ಮಾಡಿ ಹಣ ಕೊಳ್ಳೆ ಹೊಡೆಯೋ ಪ್ಲ್ಯಾನ್‌ ಬೆಳಕಿಗೆ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದ ಈ ಯೋಜನೆಯಲ್ಲಿ  ಅಧಿಕಾರಿಗಳ ಖಡಕ್ ಪರಿಶೀಲನಾ ಕ್ರಮದಿಂದ ಇದೀಗ ಸಿದ್ದರಾಮಯ್ಯ ಗೆದ್ದು ಬಂದ ಬಾಗಲಕೋಟೆ ಜಿಲ್ಲೆಯಲ್ಲಿಯೇ ಬರೋಬ್ಬರಿ 223 ನಕಲಿ ಅರ್ಜಿಗಳು ಪತ್ತೆಯಾಗಿವೆ. ನಕಲಿ ಶಾದಿಭಾಗ್ಯದ ಗೋಲ್ಮಾಲ್ ಕುರಿತು ವರದಿ ಇಲ್ಲಿದೆ….

Image result for ಶಾದಿ ಭಾಗ್ಯ

ಹೀಗೆ ನಕಲಿ ಶಾದಿಯ ಬಗ್ಗೆ ದಾಖಲೆಗಳನ್ನ ಸೃಷ್ಠಿಸಿ ಸರ್ಕಾರದ ಕಣ್ಣಿಗೆ ಮಣ್ಣೆರಚುವ ಪ್ರಯತ್ನವೊಂದು ಬೆಳಕಿಗೆ ಬಂದಿರೋದು ಬಾಗಲಕೋಟೆ ಜಿಲ್ಲೆಯಲ್ಲಿ. ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಶಾದಿಭಾಗ್ಯ ಯೋಜನೆ ಜಾರಿಗೆ ತಂದಾಗಿನಿಂದ ಅಂದ್ರೆ 2013-14ರಿಂದ 2018 ಜೂನ್ ತಿಂಗಳವರೆಗೆ ಒಟ್ಟು 2899 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದ್ರಲ್ಲಿ223 ಅರ್ಜಿಗಳು ನಕಲಿ ಎಂದು ಗೊತ್ತಾಗಿವೆ. ಇತ್ತ ಅರ್ಜಿ ಪಡೆದ ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿಗಳು ಕಚೇರಿಗೆ ಬಂದ ಪ್ರತಿಯೊಂದು ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಮದುವೆ ಇರೋ ದಿನ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಅಧಿಕಾರಿಗಳೇ ಅಚ್ಚರಿಯಾಗಿದ್ದಾರೆ. ಯಾಕಂದ್ರೆ ಮದುವೆ ನಿಗದಿಯಾದ ಸ್ಥಳದಲ್ಲಿ ಮದುವೆಯೂ ಇಲ್ಲಾ,ಮದುಮಕ್ಕಳು ಇಲ್ಲಾ. ಏನು ಇರದೇ ಕೇವಲ ನಕಲಿ ದಾಖಲೆಗಳನ್ನ ಸೃಷ್ಟಿಸಿ ಅರ್ಜಿ ಸಲ್ಲಿಕೆ ಮಾಡಿ ಹೋಗಿದ್ದಾರೆ. ಇಂತಹ ಪ್ರಕರಣಗಳು ಇದೀಗ ಬಾಗಲಕೋಟೆ ಜಿಲ್ಲೆಯೊಂದರಲ್ಲಿಯೇ ಬರೋಬ್ಬರಿ 223 ಸಿಕ್ಕಿವೆ.

Image result for ಶಾದಿ ಭಾಗ್ಯ

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರೋ ಬಾಗಲಕೋಟೆ ಜಿಲ್ಲೆಯಲ್ಲಿಯೇ ಈ ಶಾದಿಭಾಗ್ಯಕ್ಕೆ ನಕಲಿ ಅರ್ಜಿಗಳು ಪತ್ತೆಯಾಗಿದ್ದು, ಇದಕ್ಕೆ ಸಿದ್ದರಾಮಯ್ಯನವರ ಸೂಕ್ತ ಕ್ರಮಕೈಗೊಳ್ಳಬೇಕೆನ್ನುವ ಒತ್ತಾಯಗಳು ಕೇಳಿ ಬಂದಿವೆ. ಈ ಮಧ್ಯೆ ನಕಲಿ ಅರ್ಜಿಗಳು ಬಂದ್ರೂ ಸಹ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗೋದು ತಪ್ಪಿದಂತಾಗಿದ್ದು, ಸಾಲದ್ದಕ್ಕೆ ನಿಜವಾದ ಫಲಾನುಭವಿಗಳಿಗೆ ಶಾದಿಭಾಗ್ಯ ಯೋಜನೆಯ ಹಣ ದಕ್ಕುವಂತಾಗಿದೆ. ಈ ಮಧ್ಯೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಹಣ ಕೊಡಿಸೋ ಆಮಿಷ ಹೊಂದಿರೋ ಮದ್ಯವರ್ತಿಗಳು ಇದ್ದಾರೆನ್ನುವ ಆರೋಪ ಸಹ ಕೇಳಿ ಬಂದಿದ್ದು, ಇಂತವರ ವಿರುದ್ಧ ಸೂಕ್ತ ಕ್ರಮಕೈಗೊಂಡು ಈ ಶಾದಿಭಾಗ್ಯ ಯೋಜನೆ ಯಶಸ್ಸು ಕಾಣುವಂತಾಗಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ

ಒಟ್ಟಿನಲ್ಲಿ ಬಡ ಜನ್ರನ್ನ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಶಾದಿಭಾಗ್ಯದಂತಹ ಯೋಜನೆಗಳನ್ನ ಅನುಷ್ಠಾನಕ್ಕೆ ತರುತ್ತಿದ್ದರೂ ಅದ್ರಲ್ಲೂ ನಕಲಿ ಅರ್ಜಿಗಳ ಹಾವಳಿ ಕಂಡು ಬಂದಿರೋದು ವಿಪರ್ಯಾಸದ ಸಂಗತಿ.

 

Leave a Reply

Your email address will not be published.

Social Media Auto Publish Powered By : XYZScripts.com