‘ ಕಿಕಿ ಡಾನ್ಸ್ ಚಾಲೆಂಜ್ ಬ್ಯಾನ್ ಆಗಿದ್ದು ಗೊತ್ತಿರಲಿಲ್ಲ ‘ : ಕ್ಷಮೆ ಕೋರಿದ ನಿವೇದಿತಾ ಗೌಡ

ಕಿಕಿ ಡಾನ್ಸ್ ಚಾಲೆಂಜ್ ಸ್ವೀಕರಿಸಿ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಸಾರ್ವಜನಿಕರ ಕ್ಷಮೆ ಕೋರಿದ್ದಾರೆ. ಕಿಕಿ ಚಾಲೆಂಜ್ ಸ್ವೀಕರಿಸಲು ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ನಿವೇದಿತಾ ಗೌಡ ವಿರುದ್ಧ ದೂರು ನೀಡಲಾಗಿತ್ತು.

ರಾಜಧಾನಿ ಬೆಂಗಳೂರು ಪೋಲೀಸ್ ರಾಜ್ಯದಲ್ಲಿ ಕಿಕಿ ಚಾಲೆಂಜ್ ಸ್ವೀಕರಿಸುವುದನ್ನು, ವಿಡಿಯೋ ಮಾಡುವುದನ್ನು ನಿಷೇಧಿಸಿದ್ದರು. 18 ವರ್ಷದ ನಿವೇದಿತಾ ಗೌಡ ಕಿಕಿ ಡಾನ್ಸ್ ವಿಡಿಯೋ ಒಂದು ತಿಂಗಳನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

‘ ಕಿಕಿ ಚಾಲೆಂಜ್ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ನೋಡಿದ ಮೇಲೆ ನಾನೂ ಅದನ್ನು ಪ್ರಯತ್ನಿಸಿದೆ. ಕಿಕಿ ಚಾಲೆಂಜ್ ಬ್ಯಾನ್ ಆಗಿದೆ ಎಂದು ಗೊತ್ತಾದ ತಕ್ಷಣ ನನ್ನ ವಿಡಿಯೋ ತೆಗೆದು ಹಾಕಿದ್ದೆ. ಜನರು ಕಿಕಿ ಚಾಲೆಂಜ್ ಸ್ವೀಕರಿಸಿ ತೊಂದರೆಗೊಳಗಾಗುವುದನ್ನು ನಾನು ಬಯಸುವುದಿಲ್ಲ, ನಾನು ವಿಡಿಯೋ ಚಿತ್ರೀಕರಿಸುವಾಗ ಬ್ಯಾನ್ ಆಗಿದೆ ಎಂದು ಗೊತ್ತಿರಲಿಲ್ಲ ‘ ಎಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com