ಹಾಸನ : ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್ ಪಲ್ಟಿ : 15ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯ
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ರನ್ನು ಕರೆದೊಯ್ಯುತ್ತಿದ್ದ ವ್ಯಾನ್ ಒಂದು ಪಲ್ಟಿಯಾಗಿರುವ ಘಟನೆ ಹಾಸನ ತಾಲೂಕು ಮರ್ಕುಲಿ ಬಳಿ ನಡೆದಿದೆ. ದುರ್ಘಟನೆಯಲ್ಲಿ 15 ಕ್ಕೂ ಹೆಚ್ಚು ಮಹಿಳೆಯರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ವಿವಿಧ ಗ್ರಾಮಗಳಿಂದ ಹಾಸನದ ಕಾರ್ಖಾನೆ ಕೆಲಸಕ್ಕೆ ಮಹಿಳೆಯರು ತೆರಳುತ್ತಿದ್ದರು. ಚಾಲಕನ ಅತಿವೇಗದಿಂದ ರಸ್ತೆ ಬದಿಗೆ ವ್ಯಾನ್ ಮಗುಚಿದೆ. ಅದೃಷ್ಟವಶಾತ್ ದೊಡ್ಡ ಅವಘಡ ತಪ್ಪಿದಂತಾಗಿದೆ. ಹಾಸನ ಜಿಲ್ಲಾಸ್ಪತ್ರೆಗೆ ಗಾಯಾಳುಗಳ ರವಾನೆ ಮಾಡಲಾಗಿದೆ.